Your old denims will love this project
ನಾವೆಲ್ಲರೂ ಒಂದು ಜೊತೆ ಹಳೆಯ ಜೀನ್ಸ್ಅನ್ನು ಹೊಂದಿದ್ದೇವೆ, ಅದನ್ನು ನಾವು ಇಷ್ಟಪಡುತ್ತೇವೆ ಮತ್ತು ಬಹುಶಃ ಅದರೊಂದಿಗೆ ಜೀವಿಸುತ್ತೇವೆ. ಅವುಗಳ ಬಣ್ಣ ಸಂಪೂರ್ಣವಾಗಿ ಮಾಸಿಹೋಗಿದೆ ಮತ್ತು ಅವು ನಮ್ಮ ಜೀವನದ ಒಂದು ಭಾಗವಾಗಿದೆಯೆಂದು ಅನಿಸುತ್ತದೆ. ಅವುಗಳ ಅಂಚುಗಳಲ್ಲಿ ಸ್ವಲ್ಪ ದೊರಗಾದರೂ ಸಹ, ಅವುಗಳನ್ನು ಎಸೆದುಬಿಡಬೇಕಾಗುತ್ತದೆಂಬ ಆಲೋಚನೆಯಿಂದ ನಿಮ್ಮ ಮನಸ್ಸಿಗೆ ನೋವಾಗುತ್ತದೆ. ಅಂತಹವರಿಗಾಗಿ ಒಂದು ಒಳ್ಳೆಯ ಸುದ್ದಿಯಿದೆ. ಅವುಗಳಿಗೆ ಒಂದು ಹೊಸ ಜೀವನವನ್ನು ನೀಡುವ ಹಾಗೂ ಅವುಗಳನ್ನು ಡಿಸೈನರ್ ಕ್ಷೇತ್ರಕ್ಕೆ ಕೊಂಡೊಯ್ಯುವ ಒಂದು ಪ್ರಾಜೆಕ್ಟ್ಅನ್ನು ನಾವು ಹೊಂದಿದ್ದೇವೆ.
ಮರುಹುಟ್ಟು!ಇದು ಅದಕ್ಕೆ ಹತ್ತಿರವಾಗಿದೆ.
ಆ ಹಳೆಯ ಜೀನ್ಸ್ಅನ್ನು ತೆಗೆದುಕೊಂಡು, ಈ ಜಗತ್ತಿಗಿಂತ ಭಿನ್ನವಾದ ಏನಾದರೂ ಆಗಿ ಪರಿವರ್ತಿಸಿ ಎಂದು ನಾವು ಸೂಚಿಸುತ್ತೇವೆ. ಅವು ಒಂದು ವಿಭಿನ್ನ ರೀತಿಯ ವಸ್ತುವಾಗುತ್ತವೆ ಮತ್ತು ಅವು ಅರ್ಹವಾದ ಎಲ್ಲಾ ಗಮನವನ್ನು ಸೆಳೆಯುತ್ತವೆ.
ಈಗ ಇದು ಸುಲಭ. ನೀವು ನಿಮ್ಮ ಕಲ್ಪನಾಶಕ್ತಿ ಮತ್ತು ರಚನಾತ್ಮಕತೆಯನ್ನು ಬಳಸಿದರೆ ಸಾಕು. ಅಷ್ಟೆ. ಅವುಗಳಿಂದ ಏನು ಮಾಡಬೇಕೆಂದು ನೀವು ಬಯಸುತ್ತೀರಿ ಎಂಬುದನ್ನು ಯೋಜಿಸುವ ಮೂಲಕ ಆರಂಭಿಸಿ. ಅವುಗಳನ್ನು ಶಾರ್ಟ್ಸ್‌ಗಳಾಗಿ ಮಾಡಬೇಕೆಂದು ಬಯಸುತ್ತೀರಾ?ಅವುಗಳನ್ನು ಲೇಸ್ ಅಥವಾ ಪ್ಯಾಚ್‌ಗಳಿಂದ ಅಲಂಕರಿಸಲು ಬಯಸುತ್ತೀರಾ?ಯಾವುದಾದರೂ ಮತ್ತು ಎಲ್ಲವೂ ಸಾಧ್ಯ.
ಅದನ್ನು ಹೇಗೆ ಮಾಡಬಹುದು ಎಂಬುದು ಇಲ್ಲಿದೆ
ಮೊದಲಿಗೆ Ushasew.com ಗೆ ಭೇಟಿ ನೀಡಿ ಮತ್ತು ಪಾಠಗಳನ್ನು ಕಲಿಯಿರಿ. ಅವು ಸಂಕ್ಷಿಪ್ತವಾಗಿವೆ ಮತ್ತು ಅನುಸರಿಸಲು ಸುಲಭವಾಗಿವೆ. ಅವು ನಿಮಗೆ ಬೇಕಾದ ಎಲ್ಲಾ ಮಾಹಿತಿಯನ್ನು ಒದಗಿಸುತ್ತವೆ ಮತ್ತು ಉತ್ತಮ ರೀತಿಯಲ್ಲಿ ಹೇಗೆ ಹೊಲಿಯುವುದು ಎಂಬುದನ್ನು ಕಲಿಸುತ್ತವೆ. ಮೊದಲ ಕೆಲವು ಪಾಠಗಳು ನಿಮಗೆ ಮೂಲಭೂತ ವಿಷಯಗಳನ್ನು ಹೇಳಿಕೊಡುತ್ತವೆ ಹಾಗೂ ಆಮೇಲೆ ನೀವು ಹೊಲಿಗೆಯ ಕುರಿತು ಅನೇಕ ವಿಷಯಗಳನ್ನು ಕಲಿಯುತ್ತೀರಿ.
ಈ ಪಾಠಗಳನ್ನು ಸರಿಯಾದ ಕ್ರಮದಲ್ಲಿ ಅನುಸರಿಸಿ. ಪ್ರತಿಯೊಂದು ಪಾಠವು ಮುಂದಿನದಕ್ಕೆ ಕರೆದೊಯ್ಯುತ್ತದೆ, ಹಾಗಾಗಿ ವೀಡಿಯೊಗಳನ್ನು ಬಿಟ್ಟುಹೋಗಬೇಡಿ ಏಕೆಂದರೆ ಮುಖ್ಯ ಸಲಹೆಗಳು ತಪ್ಪಿಹೋಗಬಹುದು. ಪ್ರತಿಯೊಂದು ಪಾಠದ ನಂತರ ನೀವು ಪರಿಣಿತರಾಗುವ ತನಕ ಅಭ್ಯಾಸ ಮಾಡಿ.
ನೀವು ಮೂಲಭೂತ ವಿಷಯಗಳನ್ನು ಕಲಿತ ನಂತರ, ಪ್ರಾಜೆಕ್ಟ್ ನಂ 6. ಗೆ ಹೋಗಿ. ಇದು ಶಾರ್ಟ್ಸ್‌ಗಳನ್ನು ಅಲಂಕರಿಸುವುದು ಹೇಗೆ ಎಂಬುದನ್ನು ತೋರಿಸುತ್ತದೆ.
ಅದ್ಭುತ ಪರಿಣಾಮಕ್ಕಾಗಿ ಸರಳ ಹಂತಗಳು
ಒಮ್ಮೆ ನೀವು ಪ್ರಾಜೆಕ್ಟ್ ವೀಡಿಯೊವನ್ನು ವೀಕ್ಷಿಸಿದ ನಂತರ, ಅದು ಶಾರ್ಟ್ಸ್‌ಗಳನ್ನು ಅಲಂಕರಿಸುವ ವಿವಿಧ ವಿಧಾನಗಳನ್ನು ನಿಮಗೆ ತೋರಿಸಿಕೊಡುತ್ತದೆ. ಪ್ರಾಜೆಕ್ಟ್ ಲೇಸ್ಅನ್ನು ಬಳಸುತ್ತದೆ, ಆದರೆ ನೀವು ರಚನಾತ್ಮಕವಾಗಿ ಯೋಚಿಸಬಹುದು ಮತ್ತು ನಿಮ್ಮ ಕಲ್ಪನೆ ಬಯಸುವಂತಹ ಯಾವುದನ್ನೂ ಸೇರಿಸಬಹುದು. ಹೊಲಿಗೆಯ ಮೂಲಭೂತ ವಿಷಯಗಳು ಒಂದೇ ಆಗಿರುವುದರಿಂದ ವೀಡಿಯೊದಲ್ಲಿ ತೋರಿಸಿದ ಮೆಟೀರಿಯಲ್‌ಗಳ ಬದಲಿಗೆ ಬೇರೆಯದನ್ನು ಬಳಸಲು ನಿಮಗೆ ಸುಲಭವಾಗಬಹುದು.
ನೀವು ಏನು ಮಾಡಬೇಕೆಂಬುದನ್ನು ಅರ್ಥಮಾಡಿಕೊಳ್ಳಿ ಮತ್ತು ಇದನ್ನು ವೀಡಿಯೊದಲ್ಲಿ ಸವಿವರವಾಗಿ ವಿವರಿಸಲಾಗಿದೆ.
ಈ ಪ್ರಾಜೆಕ್ಟ್ ಇತರೆ ಗಾರ್ಮೆಂಟ್‌ಗಳ ಮೇಲೂ ಕೆಲಸ ಮಾಡುತ್ತದೆ.
ಒಮ್ಮೆ ನೀವು ನಿಮ್ಮ ಹಳೆಯ ಡನಿಮ್‌ಗಳಿಗೆ ಹೊಸ ಜೀವನವನ್ನು ಸೇರಿಸಿದ ನಂತರ, ನೀವು ಇತರೆ ಗಾರ್ಮೆಂಟ್‌ಗಳ ರೂಪ ಬದಲಾಯಿಸಲು ಪ್ರಯತ್ನಿಸಬಹುದು. ಅವು ಹಳೆಯದಾಗಿರಬೇಕಾಗಿಲ್ಲ, ನೀವು ಸ್ವಲ್ಪ ಸ್ಟೈಲ್ ಸೇರಿಸಲು ಬಯಸುವ ಬಟ್ಟೆಗಳನ್ನು ಆರಿಸಬಹುದು. ಅದೇ ಕೌಶಲ್ಯಗಳನ್ನು ಬಳಸಿ, ಸೂಚನೆಗಳನ್ನು ಅರ್ಥಮಾಡಿಕೊಳ್ಳಿ ಮತ್ತು ಅವುಗಳನ್ನು ವಿವಿಧ ವಿಧಾನಗಳಲ್ಲಿ ಅನ್ವಯಿಸಿ. ನೀವು ನಿಜವಾಗಿಯೂ ನಿಮ್ಮ ಸೃಜನಶೀಲ ಆಲೋಚನೆಗಳನ್ನು ಮುಕ್ತವಾಗಿ ಹರಿಯಲು ಬಿಡಬಹುದು. ಜಿಪ್ಪರ್‌ಗಳನ್ನು ಬಳಸಿ, ಟ್ಯಾಸೆಲ್‌ಗಳು ಮತ್ತು ಬೀಡ್‌ಗಳನ್ನು ಸೇರಿಸಿ, ಸ್ಲೀವ್‌ಗಳನ್ನು ಮರುಆಕಾರಗೊಳಿಸಿ, ಎಲ್ಲವೂ ಸಾಧ್ಯ. ನೀವು ಕಲಿತ ಪಾಠಗಳು ನಿಮಗೆ ಎಲ್ಲಾ ಹಂತಗಳನ್ನು ತೋರಿಸಿಕೊಟ್ಟಿವೆ. ನೀವು ಅವುಗಳನ್ನು ವಿಭಿನ್ನವಾಗಿ ಅನ್ವಯಿಸಬೇಕು ಅಷ್ಟೇ.
ಹಾಗಾಗಿ ಆ ಡೆನಿಮ್‌ಗಳನ್ನು ಕಾಯಿಸಬೇಡಿ ಮತ್ತು ವಿಶಿಷ್ಟವಾಗಿ ಹೊಲಿಯಲು ಆರಂಭಿಸಿ.
ನೀವು ಏನೆಲ್ಲಾ ರಚಿಸುತ್ತೀರಿ ಎಂಬುದನ್ನು ನಾವು ನೋಡಲು ಬಯಸುತ್ತೇವೆ. ನೀವು ಅವುಗಳನ್ನು ಪೂರ್ಣಗೊಳಿಸಿದ ನಂತರ ದಯವಿಟ್ಟು ಅವುಗಳನ್ನು ನಮ್ಮ ಸಾಮಾಜಿಕ ಜಾಲತಾಣದ ಪುಟಗಳಲ್ಲಿ ಹಂಚಿಕೊಳ್ಳಿ. ಸಾಧ್ಯವಾದರೆ ನಿಮ್ಮ ಆಲೋಚನೆಗಳು ಮತ್ತು ಎಲ್ಲಾ ಹಂತಗಳನ್ನು ವಿವರಿಸಿ, ಅದರಿಂದ ಇತರರು ನಿಮ್ಮಿಂದ ಕಲಿತುಕೊಳ್ಳಬಹುದು.