Sewing – The perfect hobby to pick up this summer
ಬೇಸಿಗೆ ಕಾಲ ಆರಂಭವಾಗಿದೆ ಹಾಗೂ ದಿನ ಕಳೆದಂತೆ ವಾತಾವರಣದ ಬಿಸಿ ಹೆಚ್ಚಾಗುತ್ತಿದೆ. ಮಕ್ಕಳಿಗೆ ಸಿಗುವ ಬೇಸಿಗೆ ರಜೆಯನ್ನು ನಾವೆಲ್ಲರೂ ಇಷ್ಟಪಡುತ್ತೇವೆ, ಆದರೆ ಅದು ಅದರದೇ ಆದ ಸಮಸ್ಯೆಗಳನ್ನು ಹೊತ್ತುತರುತ್ತದೆ. ಮಕ್ಕಳು ತಮ್ಮ ಸಮಯವನ್ನು ಹೇಗೆ ಕಳೆಯುತ್ತಾರೆ?ಅವರನ್ನು ಮನೆಯೊಳಗೆ ಇರಿಸಿಕೊಳ್ಳುವುದು ಹೇಗೆ?ಈ ರಜೆಯನ್ನು ಪ್ರಯೋಜನಕಾರಿಯಾಗಿಸಲು ನೀವು ಏನು ಮಾಡಬಹುದು?ಈ ಎಲ್ಲಾ ಪ್ರಶ್ನೆಗಳಿಗೆ ಒಂದೇ ಉತ್ತರವಿದೆ. ಅದೇನೆಂದರೆ ಹವ್ಯಾಸವನ್ನು ಬೆಳೆಸಿಕೊಳ್ಳುವುದು. ನಾವು ಹೊಲಿಗೆಯನ್ನು ಸೂಚಿಸುತ್ತೇವೆ ಏಕೆಂದರೆ ಅದು ಉಪಯುಕ್ತ, ತಲ್ಲೀನವಾಗಿಸುವ ಮತ್ತು ಪ್ರಯೋಜನಕಾರಿ ಹವ್ಯಾಸವಾಗಿದೆ!
ಹೊಲಿಗೆ? ಹೌದು! ಇದು ಗಂಡುಮಕ್ಕಳು ಮತ್ತು ಹೆಣ್ಣುಮಕ್ಕಳು ಇಬ್ಬರೂ ಹೊಂದಬಹುದಾದ ಒಂದು ಅದ್ಭುತ ಕೌಶಲ್ಯವಾಗಿದೆ. ಇದು ಪ್ರಾಯೋಗಿಕ, ಉಪಯುಕ್ತಕಾರಿ ಹವ್ಯಾಸ ಮತ್ತು ವಾಸ್ತವವಾಗಿ ಬಹಳಷ್ಟು ಇತರೆ ಪ್ರಯೋಜನಗಳನ್ನೂ ಹೊಂದಿದೆ.
ಇದನ್ನು ಕಲಿಯಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ.
ಮಕ್ಕಳು ಪಡೆಯುವ ಎರಡು ತಿಂಗಳ ರಜೆಯು ಅವರಿಗೆ ಈ ಕಲೆಯನ್ನು ಕಲಿಯಲು, ಅಭ್ಯಾಸ ಮಾಡಲು ಮತ್ತು ಸಾಧಿಸಲು ಬಹಳಷ್ಟು ಸಾಕಾಗುತ್ತದೆ. Ushasew.com ರಲ್ಲಿ ನೀವು ಕಾಣುವ ಸುಲಭ ಪಾಠಗಳು ಮತ್ತು ಪ್ರಾಜೆಕ್ಟ್‌ಗಳನ್ನು, ನಿಮಗೆ ಪ್ರತಿಯೊಂದು ಹಂತಗಳನ್ನು ವಿವರಿಸುವುದಕ್ಕಾಗಿ ವಿನ್ಯಾಸಗೊಳಿಸಲಾಗಿದೆ. ನೀವು ಒಂದು ಕೌಶಲ್ಯದ ಬಗ್ಗೆ ಕಲಿಯುತ್ತೀರಿ, ನಂತರ ಪ್ರಾಜೆಕ್ಟ್‌ಗಳನ್ನು ನೀಡಿ ಅವುಗಳನ್ನು ಕಾರ್ಯಗತಗೊಳಿಸುವಂತೆ ಹೇಳಲಾಗುತ್ತದೆ. ಉತ್ತಮವಾಗಿ ಅರ್ಥವಾಗಲು ಮತ್ತು ಕಲಿಯಲು ಈ ಎಲ್ಲಾ ವೀಡಿಯೊಗಳು 9 ವಿಭಿನ್ನ ಭಾಷೆಗಳಲ್ಲಿ ಲಭ್ಯವಾಗುತ್ತವೆ. ಎಲ್ಲಾ ತಿಳುವಳಿಕೆ ಮತ್ತು ಮಾಹಿತಿಯನ್ನು ಆಸಕ್ತಿದಾಯಕ ರೀತಿಯಲ್ಲಿ ನೀಡಲಾಗಿದೆ. ನೀವು ಆರಂಭಿಸಿದರೆ ಕೆಲವೇ ದಿನಗಳಲ್ಲಿ ಮೂಲಭೂತ ವಿಷಯಗಳನ್ನು ಚೆನ್ನಾಗಿ ತಿಳಿದುಕೊಳ್ಳುತ್ತೀರಿ, ನಂತರದ ವಿಷಯ ನೀವು ಎಷ್ಟು ಅಭ್ಯಾಸ ಮಾಡುತ್ತೀರಿ ಎಂಬುದರ ಬಗ್ಗೆಯಾಗಿರುತ್ತದೆ.
ಟೈಮ್ ಪಾಸ್ ಟಿವಿ ಮತ್ತು ಮಾಹಿತಿಯುಕ್ತ ವೀಡಿಯೊಗಳು.
ನಾವು ಕಲಿಸುವ ವಿಧಾನವನ್ನು ನಿಮ್ಮ ಮಕ್ಕಳು ಇಷ್ಟಪಡುತ್ತಾರೆ. ಟಿವಿ ವೀಕ್ಷಿಸಿ ಬೇಸರಗೊಳ್ಳುವ ಅಥವಾ ಸಮಯ ವ್ಯರ್ಥ ಮಾಡುವ ಬದಲಿಗೆ ಅವರು ಕಂಪ್ಯೂಟರ್ ಅಥವಾ ಫೋನ್ ಬಳಸಿ ಈ ವೀಡಿಯೊಗಳನ್ನು ನೋಡಿ ಕಲಿಯಬಹುದು. ನಾವು ಪ್ರತಿಯೊಂದು ವೀಡಿಯೊವನ್ನು ಅನುಸರಿಸಲು ಸಲಭವಾಗುವಂತೆ ಮಾಡಿದ್ದೇವೆ. ಪ್ರತಿಯೊಂದು ಹಂತವನ್ನು ವಿವರಿಸಲಾಗಿದೆ. ಹಾಗೂ ಪಾಠಗಳು ಕೆಲವೇ ನಿಮಿಷಗಳನ್ನು ತೆಗೆದುಕೊಳ್ಳುತ್ತವೆ. ಹಾಗಾಗಿ ನೀವು ಹೊಲಿಗೆ ಮೆಷಿನ್ಅನ್ನು ಹೊಂದಿದ್ದರೆ (ನಿಮಗೆ ಬೇಕಿದ್ದರೆ ಉಷಾ ಶ್ರೇಣಿಯನ್ನು ನೋಡಲು ಇಲ್ಲಿ ಒಂದು ಕ್ಲಿಕ್ ಮಾಡಿ ), ನಿಮ್ಮ ಮಕ್ಕಳಿಗೆ ಅದರ ಮುಂದೆ ಕುಳಿತುಕೊಂಡು, ವೀಡಿಯೊಗಳನ್ನು ನೋಡಿ ಹೊಲಿಯಲು ಆರಂಭಿಸುವಂತೆ ಹೇಳಿ. ವೀಡಿಯೊಗಳನ್ನು ಸಂವದನಾತ್ಮಕವಾಗಿ ವಿನ್ಯಾಸಗೊಳಿಸಿರುವುದರಿಂದ, ಅವರು ಅವುಗಳನ್ನು ವೀಕ್ಷಿಸಬಹುದು ಮತ್ತು ಕಲಿತದ್ದನ್ನು ಕೂಡಲೇ ಮೆಷಿನ್‌ನಲ್ಲಿ ಪ್ರಯತ್ನಿಸಬಹುದು.
ಹೊಸ ಕೌಶಲ್ಯವು ಒಂದು ಉತ್ತಮ ವಿಷಯವಾಗಿದೆ!
ಇಂದಿನ ಮಕ್ಕಳು ನಿಜವಾಗಿಯೂ ಸ್ಪರ್ಧಾತ್ಮಕವಾಗಿರುತ್ತಾರೆ. ಅವರೆಲ್ಲರೂ ಉತ್ತಮರಾಗಿರಲು ಬಯಸುತ್ತಾರೆ ಮತ್ತು ಹೆಸರುವಾಸಿಯಾಗುವ ಮಾರ್ಗಗಳನ್ನು ಕಂಡುಕೊಳ್ಳುತ್ತಿರುತ್ತಾರೆ. ಹೊಲಿಗೆಯು ಒಂದು ಕೌಶಲ್ಯವಾಗಿದ್ದು, ಅದು ಅವರಿಗೆ ಸೃಜನಾತ್ಮಕವಾಗಿರಲು ಅನುವು ಮಾಡಿಕೊಡುತ್ತದೆ ಮತ್ತು ಅವರ ವಿನ್ಯಾಸಗಳಿಗೆ ರೂಪವನ್ನು ನೀಡಲು ಪ್ರೋತ್ಸಾಹಿಸುತ್ತದೆ. ಅವರು ವಿಭಿನ್ನ ಉಡುಗೊರೆಗಳಿಂದ ತಮ್ಮ ಸ್ನೇಹಿತರಿಗೆ ಅಚ್ಚರಿ ಮೂಡಿಸಬಹುದು ಅಥವಾ ‘ಫ್ಯಾಷನ್ ಲೇಬಲ್’ಅನ್ನು ಆರಂಭಿಸಬಹುದು. ಒಂದು ಹೊಸ ಕೌಶಲ್ಯವನ್ನು ಹೊಂದುವುದರಿಂದ ನಿಜವಾಗಿಯೂ ಮಗುವಿಗೆ ಬಹಳಷ್ಟು ಸಹಾಯವಾಗುತ್ತದೆ. ಅದು ಅವರನ್ನು ತೊಡಗಿಕೊಂಡಿರುವಂತೆ ಮಾಡುತ್ತದೆ ಮತ್ತು ಉದ್ದೇಶದ ಅರ್ಥವನ್ನು ನೀಡುತ್ತದೆ. ಅವರ ಸಮಾನ ವಯಸ್ಕರ ವಲಯದಲ್ಲಿ ಅವರು ಹೀರೋಗಳಾಗುತ್ತಾರೆ ಎಂಬುದನ್ನು ಬೇರೆ ಹೇಳಬೇಕಾಗಿಲ್ಲ.
ದಿನದಲ್ಲಿ ಹೆಚ್ಚು ಬಿಸಿಯಿರುವ ಸಮಯದಲ್ಲಿ ಕೆಲವು ಗಂಟೆಗಳು.
ಹೊಲಿಗೆಯನ್ನು ಕಲಿಯುವುದು ಮುಂಬರುವ ಬೇಸಿಗೆಯ ಮಧ್ಯಾಹ್ನವನ್ನು ಬಳಸಿಕೊಳ್ಳುವ ಅತ್ಯುತ್ತಮ ವಿಧಾನವೆಂಬುದನ್ನು ಈಗ ನೀವು ಖಂಡಿತವಾಗಿಯೂ ಒಪ್ಪುತ್ತೀರಿ. ಮನೆಯೊಳಗಿದ್ದುಕೊಂಡು, Ushasew.com ಗೆ ಲಾಗಿನ್ ಮಾಡಿ ನಿಮ್ಮ ಪಾಠಗಳನ್ನು ಆರಂಭಿಸುವುದು ಅತ್ಯಂತ ಬುದ್ಧಿವಂತ ವಿಷಯವಾಗಿದೆ.
ಅತ್ಯಂತ ಮೋಜಿನ ರೀತಿಯಲ್ಲಿ ಕಲಿಯಿರಿ ಮತ್ತು ರಚಿಸಿ.
Ushasew.com ರಲ್ಲಿ ಹೇಗೆ ಹೊಲಿಯುವುದು ಎಂಬುದನ್ನು ಅತ್ಯಂತ ಮೋಜಿನ ಮತ್ತು ಆಸಕ್ತಿಕರವಾದ ರೀತಿಯಲ್ಲಿ ನಾವು ನಿಮಗೆ ಕಲಿಸುತ್ತೇವೆ. ಮಾಹಿತಿಯುಕ್ತ ಮತ್ತು ಅನುಸರಿಸಲು ಸುಲಭವಾದ ವೀಡಿಯೊಗಳನ್ನು ನಾವು ಹೊಂದಿದ್ದೇವೆ. ಈ ಪ್ರಾಜೆಕ್ಟ್‌ಗಳು ನಿಮ್ಮ ಹೊಸ ಕೌಶಲ್ಯಗಳನ್ನು ಹೊರತರುತ್ತವೆ ಮತ್ತು ಪ್ರಯೋಜನಕಾರಿಯಾಗಿವೆ.
ಕಲಿಯಲು ಮತ್ತು ರಚಿಸಲು ನೀವು ಮೂಲಭೂತ ವಿಷಯಗಳೊಂದಿಗೆ ಆರಂಭಿಸಬೇಕು. ಒಮ್ಮೆ ನೀವು ಅವುಗಳಲ್ಲಿ ನಿಪುಣರಾದ ನಂತರ, ನಿಮ್ಮ ಹೊಸ ಕೌಶಲ್ಯವನ್ನು ಬಳಸಿ, ಅದ್ಭುತ ವಸ್ತುಗಳನ್ನು ರಚಿಸಬಹುದು. ನೀವು ವಸ್ತುಗಳನ್ನು ಮಾಡಲು ಆರಂಭಿಸುವ ವೀಡಿಯೊಗಳನ್ನು ಪ್ರಾಜೆಕ್ಟ್‌ಗಳೆಂದು ಕರೆಯಲಾಗುತ್ತದೆ. ಹಾಗೂ ನಿಮ್ಮ ಉತ್ಸುಕತೆಯನ್ನು ಹೆಚ್ಚಿಸಲು ಮತ್ತು ನಿಮ್ಮನ್ನು ತೊಡಗಿಸಿಕೊಳ್ಳಲು ನಾವು ಬಹಳಷ್ಟು ವೀಡಿಯೊಗಳನ್ನು ಹೊಂದಿದ್ದೇವೆ.
ನಿಮಗೆ ಕಲಿಕಾ ಪ್ರಕ್ರಿಯೆಯ ಕಲ್ಪನೆಯನ್ನು ಒದಗಿಸಲು, ನೀವು ಹೇಗೆ ಆರಂಭಿಸಬೇಕೆಂಬುದು ಇಲ್ಲಿದೆ:
- ಆರಂಭದಲ್ಲಿ, ನೀವು ನಿಮ್ಮ ಹೊಲಿಗೆ ಮೆಷಿನ್ಅನ್ನು ಹೇಗೆ ಸೆಟಪ್ ಮಾಡುತ್ತೀರಿ ಎಂಬುದನ್ನು ಕಲಿಯುತ್ತೀರಿ.
- ನಂತರ ಪೇಪರ್ ಮೇಲೆ ಹೊಲಿಯುವ ಮೂಲಕ ನಿಮ್ಮ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವತ್ತ ಮುಂದುವರಿಯುತ್ತೀರಿ. ಹೌದು ಪೇಪರ್!ಇದು ನಿಯಂತ್ರಣ ಮತ್ತು ನಿಖರತೆಯನ್ನು ಹೆಚ್ಚಿಸಲು ಅತ್ಯುತ್ತಮ ಮಾರ್ಗ.
- ಇದನ್ನು ಅಭ್ಯಾಸ ಮಾಡಿದ ನಂತರ ನೀವು ಫ್ಯಾಬ್ರಿಕ್ಅನ್ನು ಹೇಗೆ ಹೊಲಿಯುವುದು ಎಂಬುದನ್ನು ಕಲಿಯುತ್ತೀರಿ.
- ನೀವು ಈ ಮೂಲಭೂತ ಹಂತಗಳನ್ನು ತಿಳಿದುಕೊಂಡ ನಂತರ ಮಾತ್ರವೇ ಪ್ರಾಜೆಕ್ಟ್ ಮಾಡಬೇಕು. ಹಾಗೂ ಮೊದಲನೆಯದು ತುಂಬಾ ಆಸಕ್ತಿಕರವಾಗಿದೆ.
- ಬುಕ್ಮಾರ್ಕ್ ನೀವು ಮಾಡುವ ಮೊದಲ ಪ್ರಾಜೆಕ್ಟ್ ಆಗಿದೆ. ಇದು ಸರಳ, ಮಾಡಲು ಸುಲಭ ಮತ್ತು ಒಂದು ಗಂಟೆಗಿಂತ ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ನಿಮಗೆ ಈ ಪ್ರಾಜೆಕ್ಟ್ ನಿಜವಾಗಿಯೂ ಪ್ರಯೋಜನಕಾರಿಯಾಗಿರುತ್ತದೆ. ಇದು ನಿಮ್ಮನ್ನು ಮುಂದಿನ ಪಾಠಕ್ಕೆ ಉತ್ತೇಜಿಸುತ್ತದೆ.
ಈ ಎಲ್ಲಾ ಪಾಠ ಮತ್ತು ವೀಡಿಯೊಗಳು 9 ಭಾರತೀಯ ಭಾಷೆಗಳಲ್ಲಿ ಲಭ್ಯವಾಗುತ್ತವೆ. ಹಾಗಾಗಿ ನೀವು ಆರಂಭಿಸುವ ಮೊದಲು ನಿಮಗೆ ಹೆಚ್ಚು ಅನುಕೂಲಕರವಾದ ಭಾಷೆಯನ್ನು ಆರಿಸಿ.
ಉಷಾ ನಿಮಗಾಗಿ ವಿನ್ಯಾಸಗೊಳಿಸಲಾದ ಮೆಷಿನ್ಅನ್ನು ಹೊಂದಿದೆ.
ಉಷಾದಲ್ಲಿ ನಾವು ಪ್ರತಿಯೊಂದು ವಿಧದ ಬಳಕೆದಾರರಿಗೂ ಉಪಯುಕ್ತವಾದ ಹೊಲಿಗೆ ಮೆಷಿನ್‌ಗಳ ಶ್ರೇಣಿಯನ್ನು ತಯಾರಿಸಿದ್ದೇವೆ. ಆರಂಭಿಗರಿಂದ ಪರಿಣಿತ ವೃತ್ತಿಪರರವರೆಗೂ ಸರಿಹೊಂದುವ ಮೆಷಿನ್ಅನ್ನು ನಾವು ಹೊಂದಿದ್ದೇವೆ. ನಮ್ಮ ಮೆಷಿನ್‌ಗಳ ಶ್ರೇಣಿಯನ್ನು ಅವಲೋಕಿಸಿ ಮತ್ತು ನಿಮ್ಮ ಅವಶ್ಯಕತೆಗಳಿಗೆ ಒಪ್ಪುವ ಮೆಷಿನ್ಅನ್ನು ಆರಿಸಿ. ನೀವು ನಮ್ಮ ಗ್ರಾಹಕ ಸೇವಾ ಕಾರ್ಯಕರ್ತರೊಂದಿಗೆ ಮಾತನಾಡಲು ಬಯಸಿದಲ್ಲಿ, ಅವರು ನಿಮಗೆ ಬೇಕಾದ ಎಲ್ಲಾ ಮಾಹಿತಿಯನ್ನು ನೀಡುತ್ತಾರೆ. www.ushasew.com ರಲ್ಲಿ ನಮ್ಮ ಉತ್ಪನ್ನಗಳ ಶ್ರೇಣಿಯನ್ನು ಅವಲೋಕಿಸಿ, ನಿಮಗೆ ಯಾವುದು ಇಷ್ಟವಾಗುತ್ತದೆಂದು ನೋಡಿ, ನಂತರ ನಮ್ಮ ವೆಬ್‌ಸೈ ಟ್‌ನಲ್ಲಿರುವ ಸ್ಟೋರ್ ಲೊಕೇಟರ್‌ಅನ್ನು ಬಳಸಿ ನಿಮ್ಮ ಹತ್ತಿರದ ಉಷಾ ಸ್ಟೋರ್‌ಅನ್ನು ಹುಡುಕಿ.
ನೀವು ಹೊಲಿಗೆಯನ್ನು ಆರಂಭಿಸಿದ ನಂತರ ಏನೆಲ್ಲಾ ರಚಿಸುತ್ತೀರೆಂದು ನೋಡಲು ನಾವು ಇಷ್ಟಪಡುತ್ತೇವೆ.
ಒಮ್ಮೆ ನೀವು ಹೊಲಿಗೆಯನ್ನು ಆರಂಭಿಸಿದ ನಂತರ, ನಾವು ನಿಮ್ಮ ರಚನೆಗಳನ್ನು ನೋಡಲು ಇಚ್ಛಿಸುತ್ತೇವೆ. ದಯವಿಟ್ಟು ಅವುಗಳನ್ನು ನಮ್ಮ ಯಾವುದೇ ಸಾಮಾಜಿಕ ಜಾಲತಾಣದ ಪುಟಗಳಲ್ಲಿ ಹಂಚಿಕೊಳ್ಳಿ. – (ಫೇಸ್ಬುಕ್), (ಇನ್ಸ್ಟಾಗ್ರಾಮ್), (ಟ್ವಿಟರ್), (ಯುಟ್ಯೂಬ್). ನೀವು ಅದನ್ನು ಏಕೆ ಮಾಡಿದಿರಿ, ಅದು ಯಾರಿಗಾಗಿ ಮತ್ತು ಅದನ್ನು ಹೇಗೆ ವಿಶೇಷವಾಗಿ ಮಾಡಿದಿರಿ ಎಂಬುದನ್ನು ನಮಗೆ ಹೇಳಿ.
ಮುಂದೆ ದೀರ್ಘ ಬೇಸಿಗೆಕಾಲ ಬರುತ್ತದೆ, ಆದ್ದರಿಂದ ನೀವು ತಂಪಗೆ ಮನೆಯಲ್ಲೇ ಇರಿ ಮತ್ತು ನಿಮ್ಮ ಪಾಠಗಳನ್ನು ಆರಂಭಿಸಿ.