A Small Bag for a Big Change
ಪ್ಲಾಸ್ಟಿಕ್!ಈ ಹಾನಿಕರ ಪದಾರ್ಥದ ದುಷ್ಪರಿಣಾಮಗಳನ್ನು ನಾವೆಲ್ಲರೂ ತಿಳಿದಿದ್ದೇವೆ. ಇದು ನಮ್ಮ ಪ್ರಪಂಚವನ್ನು ನಿಧಾನವಾಗಿ ನಾಶಪಡಿಸುತ್ತಿದೆ. ನಮ್ಮ ನಗರಗಳು, ಕಾಡುಗಳು, ನದಿಗಳು, ಸರೋವರಗಳು ಮತ್ತು ಸಾಗರಗಳು ಪ್ಲಾಸ್ಟಿಕ್ನಿಂದ ತುಂಬಿಹೋಗಿವೆ. ಪ್ರಾಣಿಗಳು, ಮೀನುಗಳು ಮತ್ತು ಹಕ್ಕಿಗಳು ಈ ಮಾಲಿನ್ಯದ ದುಷ್ಪರಿಣಾಮವನ್ನು ಅನುಭವಿಸುತ್ತಿವೆ. ಆದರೂ ನಾವು ಪ್ರತಿ ದಿನ ಈ ಸಮಸ್ಯೆಗೆ ಇನ್ನಷ್ಟು ಸೇರಿಸುತ್ತಿದ್ದೇವೆ.
ನೀವು ಪ್ಲಾಸ್ಟಿಕ್ ಬ್ಯಾಗ್ಅನ್ನು ಸ್ವೀಕರಿಸಿದರೆ, ನೀವು ಈ ಸಮಸ್ಯೆಯ ಒಂದು ಭಾಗವಾಗುತ್ತೀರಿ. ಕಿರಾಣಿ ಸಾಮಾನುಗಳನ್ನು ತುಂಬಿಸುವುದು, ಹಣ್ಣುಗಳನ್ನು ಖರೀದಿಸುವುದು, ಮನೆಗೆ ತರಕಾರಿಗಳನ್ನು ತರುವುದು, ಪ್ಲಾಸ್ಟಿಕ್ ಬ್ಯಾಗ್ಗಳ ಮೂಲಗಳಿಗೆ ಕೊನೆಯಿಲ್ಲ. ದುರದೃಷ್ಟವಶಾತ್ ಈ ಬ್ಯಾಗ್ಗಳು ಮರುಬಳಕೆ ಮಾಡಲ್ಪಡುವುದಿಲ್ಲ ಮತ್ತು ಮರುಬಳಕೆಯಾದರೂ ಸಹ ಅವುಗಳು ಅಂತಿಮವಾಗಿ ಕಸದಲ್ಲಿ ಹೊರಗೆ ಎಸೆಯಲ್ಪಡುತ್ತವೆ. ಅಲ್ಲಿಂದ ಊಹಿಸಲಾಗದಷ್ಟು ಹಾನಿಯನ್ನು ಉಂಟುಮಾಡುವ ಅವುಗಳ ಪ್ರಯಾಣ ಆರಂಭವಾಗುತ್ತದೆ!
ಈಗ ಒಂದು ದೊಡ್ಡ ವ್ಯತ್ಯಾಸವನ್ನು ಉಂಟುಮಾಡಬಹುದಾದ ಪರಿಹಾರವನ್ನು ನೀವು ಹೊಂದಿದ್ದೀರಿ!ನಿಮ್ಮ ಸ್ವಂತ ಬಟ್ಟೆಯ ಶಾಪಿಂಗ್ ಬ್ಯಾಗ್ಅನ್ನು ತಯಾರಿಸುವ ಮೂಲಕ ಪ್ಲಾಸ್ಟಿಕ್ಗೆ ‘ಬೇಡ’ ಎಂದು ಹೇಳಿ.
ಚಿಂತಿಸಬೇಡಿ!ನಾವು ಇದನ್ನು ಬಹಳ ಸುಲಭಗೊಳಿಸಿದ್ದೇವೆ ಮತ್ತು ಇದನ್ನು ಮಾಡಲು ನೀವು ಇಷ್ಟಪಡುತ್ತೀರಿ.
ಇದಕ್ಕಾಗಿ ನೀವು ಮಾಡಬೇಕಿರುವುದೇನೆಂದರೆ ಮೊದಲಿಗೆ www.ushasew.com ರಲ್ಲಿನ ಹೊಲಿಗೆ ಪಾಠಗಳನ್ನು ಕಲಿಯಿರಿ ಮತ್ತು ವೀಡಿಯೊ ವೀಕ್ಷಿಸಲು ಆರಂಭಿಸಿ. ಅದು ಎಲ್ಲಾ ಸೂಚನೆಗಳನ್ನು ಹೊಂದಿದೆ ಹಾಗೂ ಪ್ರತಿಯೊಂದು ಹಂತವನ್ನು ಸ್ಪಷ್ಟವಾಗಿ ವಿವರಿಸುತ್ತದೆ.
ಹಂತಗಳು ಅನುಸರಿಸಲು ಸರಳವಾಗಿವೆ. ಕೆಲವು ಫ್ಯಾಬ್ರಿಕ್ನ ಚೂರುಗಳು, ಕೆಲವು ರಿಬ್ಬನ್ಗಳು ಮತ್ತು ನಿಮ್ಮ ಉಷಾ ಹೊಲಿಗೆ ಮೆಷಿನ್ ಮೊದಲಾದವುಗಳಿಂದ ನೀವು ನಿಮ್ಮ ಶಾಪಿಂಗ್ ಬ್ಯಾಗ್ಅನ್ನು ಹೆಚ್ಚು ಸಮಯ ತೆಗೆದುಕೊಳ್ಳದೆ ಸಿದ್ಧಗೊಳಿಸಬಹುದು.
ನಿಮಗೆ ಯಾವುದೇ ಪಾಯಿಂಟ್ನಲ್ಲಿ ತಿಳಿಯದಿದ್ದರೆ, ದಯವಿಟ್ಟು ಹಿಂದಿನ ಪಾಠಗಳಿಗೆ ಹೋಗಿ. ಪ್ರತಿಯೊಂದು ಪಾಠಗಳು ನಿಮಗೆ ಹೊಲಿಗೆಯನ್ನು ವಿವರವಾಗಿ ಅರ್ಥಮಾಡಿಕೊಳ್ಳಲು ನೆರವಾಗುತ್ತವೆ. ಹಾಗೂ ನೀವು ನೇರ ಸಾಲುಗಳಲ್ಲಿ ಹೊಲಿಯಲು, ಕರ್ವ್ಗಳನ್ನು ಅನುಸರಿಸಲು, ಮೆಟೀರಿಯಲ್ಅನ್ನು ಹೆಮ್ ಮಾಡಲು ಮತ್ತು ಇನ್ನೂ ಅನೇಕ ವಿಷಯಗಳನ್ನು ಕಲಿಯುತ್ತೀರಿ.
ನಿಮ್ಮ ಶಾಪಿಂಗ್ ಬ್ಯಾಗ್ಅನ್ನು ತಯಾರಿಸುವಾಗ ನಿಮ್ಮ ರಚನಾತ್ಮಕತೆ ಮತ್ತು ಕಲ್ಪನಾಶಕ್ತಿಯನ್ನು ಬಳಸಿಕೊಳ್ಳಿ. ವೀಡಿಯೊಗಳು ನಿಮಗೆ ಒಂದು ವಿನ್ಯಾಸವನ್ನು ಹೇಗೆ ಹೊಲಿಯುವುದೆಂದು ತೋರಿಸಿಕೊಡುತ್ತವೆ, ಆದರೆ ನೀವು ಮೂಲಭೂತ ವಿಷಯಗಳನ್ನು ಬಳಸಿ ನಿಮ್ಮ ಸ್ವಂತ ವಿನ್ಯಾಸಗಳನ್ನು ರಚಿಸಬಹುದು.
ದಯವಿಟ್ಟು ನಿಮಗೆ ಸಾಧ್ಯವಾದಷ್ಟು ಶಾಪಿಂಗ್ ಬ್ಯಾಗ್ಗಳನ್ನು ತಯಾರಿಸಿ ಹಾಗೂ ಅವುಗಳನ್ನು ನಿಮ್ಮ ಕುಟುಂಬಸ್ಥರಿಗೆ, ಸ್ನೇಹಿತರಿಗೆ ಮತ್ತು ನೆರೆಹೊರೆಯವರಿಗೆ ಉಡುಗೊರೆಯಾಗಿ ನೀಡಿ. ಪ್ರತಿಯೊಂದು ಬಟ್ಟೆಯ ಶಾಪಿಂಗ್ ಬ್ಯಾಗ್ ಪ್ರತಿ ವರ್ಷ ನೂರಾರು ಪ್ಲಾಸ್ಟಿಕ್ ಬ್ಯಾಗ್ಗಳನ್ನು ತೆಗೆದುಹಾಕುತ್ತದೆ ಎಂಬುದನ್ನು ನೆನಪಿಡಿ. ಹಾಗಾಗಿ ನೀವು ಹೆಚ್ಚು ಈ ಬ್ಯಾಗ್ಗಳನ್ನು ತಯಾರಿಸಿದಷ್ಟು, ನಮ್ಮ ಭವಿಷ್ಯವು ಉತ್ತಮವಾಗುತ್ತದೆ, ಉಜ್ವಲವಾಗುತ್ತದೆ ಮತ್ತು ಸ್ವಚ್ಛವಾಗುತ್ತದೆ.