If you are going to learn sewing then do it on an USHA Allure Dlx
ಹೊಲಿಗೆಯು ಒಂದು ಅದ್ಭುತ ಕೌಶಲ್ಯವಾಗಿದೆ. ಹಿಂದಿನ ಕಾಲದಲ್ಲಿ ಎಲ್ಲರಿಗೂ ಹೊಲಿಯುವುದು ಹೇಗೆಂದು ತಿಳಿದಿತ್ತು. ಅದು ಬಟನ್ ಆಗಿರಲಿ ಅಥವಾ ಜೀನ್ಸ್ ಹೆಮಿಂಗ್ ಮಾಡುವುದಾಗಿರಲಿ, ಆ ಕೆಲಸವನ್ನು ಮಾಡಲು ಮನೆಯಲ್ಲಿ ಯಾರಾದರೂ ಇರುತ್ತಿದ್ದರು. ಇಂದು ದುರದೃಷ್ಟವಶಾತ್ ಹೆಚ್ಚಿನವರಿಗೆ ಹೊಲಿಯುವುದು ಹೇಗೆಂದು ತಿಳಿದಿಲ್ಲ ಹಾಗೂ ನಮ್ಮಲ್ಲಿ ಬಹಳಷ್ಟು ಜನರು ಹೊಲಿಗೆ ಮೆಷಿನ್ ಮುಂದೆಯೇ ಕುಳಿತುಕೊಂಡಿಲ್ಲ. ಏಕೆ ಎಂದು ಕೇಳಿದರೆ, ಅದು ಒಂದು ಸಂಕೀರ್ಣವಾದ ಕೆಲಸ, ಜಡ ಮತ್ತು ನೀರಸವಾಗಿರುತ್ತದೆಂದು ಹೆಚ್ಚಿನವರು ಉತ್ತರಿಸುತ್ತಾರೆ.
ಇದು ಸತ್ಯಕ್ಕೆ ಹತ್ತಿರವಾದ ಹೇಳಿಕೆಯಲ್ಲ. ಹೊಲಿಗೆ ತಂತ್ರಜ್ಞಾನದ ಸುಧಾರಣೆಗೆ ಧನ್ಯವಾದಗಳು, ಈಗ ಇದು ಅತ್ಯಂತ ಸುಲಭವಾದ ಕೌಶಲ್ಯಗಳಲ್ಲಿ ಒಂದಾಗಿದೆ. ಹೊಲಿಗೆ ಮೆಷಿನ್ಗಳು ಈಗ ವಿದ್ಯುಚ್ಚಾಲಿತವಾಗಿವೆ, ಕಾರ್ಯಾಚರಿಸಲು ಸುಲಭವಾಗಿವೆ ಮತ್ತು ಕೆಲವು ಕಂಪ್ಯೂಟರ್ಗಳನ್ನೂ ಹೊಂದಿವೆ.
ಉಷಾ ವ್ಯಾಪಕ ಶ್ರೇಣಿಯ ಹೊಲಿಗೆ ಮೆಷಿನ್ಗಳನ್ನು ಹೊಂದಿದೆ. ಸರಳವಾಗಿ ಕೈಯಿಂದ ಕಾರ್ಯಾಚರಿಸುವುದರಿಂದ ಹಿಡಿದು, ಸ್ವಯಂಚಾಲಿತವಾಗಿ ವಿನ್ಯಾಸಗಳನ್ನು ರಚಿಸಲು ಪ್ರೋಗ್ರಾಮ್ ಮಾಡಬಹುದಾದ ಮೆಷಿನ್ಗಳವರೆಗೆ ಮಾಡೆಲ್ಗಳು ವ್ಯಾಪಿಸಿವೆ. ಈ ಶ್ರೇಣಿಯ ಮಧ್ಯದಲ್ಲಿರುವ ಅತ್ಯುತ್ತಮ ಮೆಷಿನ್ಗಳಲ್ಲಿ ಒಂದು ಉಷಾ ಅಲ್ಯೂರ್ ಡಿಲಕ್ಸ್.
ಉಷಾ ಅಲ್ಯೂರ್ ಡಿಲಕ್ಸ್ ನೀವು ಹೊಲಿಗೆಯನ್ನು ಕಾಣುವ ರೀತಿಯನ್ನು ಹೇಗೆ ಬದಲಾಯಿಸಬಲ್ಲದು ಎಂಬುದನ್ನು ನೋಡೋಣ. ನಾವು ಒಂದು ಸಮಸ್ಯೆಯನ್ನು ಹೇಳುತ್ತೇವೆ ಹಾಗೂ ಉಷಾ ಅಲ್ಯೂರ್ ಡಿಲಕ್ಸ್ ಅದನ್ನು ಹೇಗೆ ನಿವಾರಿಸುತ್ತದೆ ಎಂಬುದನ್ನು ನಿಮಗೆ ತೋರಿಸುತ್ತೇವೆ. ಈ ಸಮಯದಲ್ಲಿ ಇದನ್ನು ತೆಗೆದುಕೊಳ್ಳೋಣ.
“ನನಗೆ ಸೂಜಿಗೆ ದಾರ ಪೋಣಿಸಲಾಗುವುದಿಲ್ಲ”
ಬಹಳಷ್ಟು ಮಂದಿ ಆರಂಭಿಸುವ ಮೊದಲೇ ನಿಲ್ಲಿಸುತ್ತಾರೆ ಏಕೆಂದರೆ ಅವರಿಗೆ ಮೆಷಿನ್ಅನ್ನು ಸೆಟಪ್ ಮಾಡುವುದು ಹೇಗೆ ಮತ್ತು ಸೂಜಿಗೆ ದಾರ ಪೋಣಿಸುವುದು ಹೇಗೆ ಎಂಬುವುದು ತಿಳಿದಿರುವುದಿಲ್ಲ. ನೀವು ಇನ್ನು ಮುಂದೆ ಅದಕ್ಕಾಗಿ ಕಷ್ಟಪಡಬೇಕಾಗಿಲ್ಲ. ನೀವು ಮಾಡಬೇಕಿರುವುದಿಷ್ಟೆ ವೀಡಿಯೊವನ್ನು ವೀಕ್ಷಿಸಿ ಮತ್ತು ಸೂಚನೆಗಳನ್ನು ಅನುಸರಿಸಿ. ಹಾಗೂ ನಿಮಗೆ ತಿಳಿಯುವ ಮೊದಲೇ ಸೂಜಿಯಲ್ಲಿ ದಾರವಿರುವುದನ್ನು ನೀವು ಕಾಣುತ್ತೀರಿ. ಅನುಸರಿಸಬೇಕಾದ ಎಲ್ಲಾ ಹಂತಗಳನ್ನೂ ವೀಡಿಯೊದಲ್ಲಿ ವಿವರಿಸಲಾಗಿದೆ. ಕೊನೆಯಲ್ಲಿ ನೀವು ಬಾಬಿನ್ಅನ್ನು ಸ್ಪೂಲ್ ಮಾಡಲು, ಹೊಲಿಗೆ ಉದ್ದವನ್ನು ಸರಿಹೊಂದಿಸಲು, ಹೊಲಿಗೆ ಪ್ಯಾಟರ್ನ್ಗಳನ್ನು ಬದಲಾಯಿಸಲು ಮತ್ತು ನಿಮ್ಮ ಮೆಷಿನ್ನ ಒಳಗೆ ಹೊರಗೆ ತಿಳಿಯಲು ಸಮರ್ಥರಾಗುತ್ತೀರಿ.
“ಬಹಳ ಸುಸ್ತಾಗುವುದು’
ಉಷಾ ಅಲ್ಯೂರ್ ಡಿಲಕ್ಸ್ ಸಂಪೂರ್ಣವಾಗಿ ವಿದ್ಯುತ್ತಿನಿಂದ ಕಾರ್ಯನಿರ್ವಹಿಸುವ ಹೊಲಿಗೆ ಮೆಷಿನ್ ಆಗಿದೆ. ನೀವು ಪ್ರಯಾಸಪಡುವ ಅಗತ್ಯವಿಲ್ಲ ಅಥವಾ ಸ್ವಲ್ಪವೂ ಬೆವರು ಸುರಿಸಬೇಕಾಗಿಲ್ಲ. ನೀವು ಮಾಡಬೇಕಿರುವುದಿಷ್ಟೆ ಆರಂಭಿಸಲು ಸಣ್ಣ ಫೂಟ್ ಪೆಡಲ್ಅನ್ನು ಒತ್ತಬೇಕು. ಇದು ಕಾರ್ನ ಆಕ್ಸಲರೇಟರ್ನಂತೆಯೇ ಕಾರ್ಯನಿರ್ವಹಿಸುತ್ತದೆ. ನೀವು ಹೆಚ್ಚು ಒತ್ತಿದಷ್ಟು ಮೆಷಿನ್ ವೇಗವಾಗಿ ಕಾರ್ಯಾಚರಿಸುತ್ತದೆ. ನಾವು ಪ್ರತಿ ನಿಮಿಷಕ್ಕೆ ನೂರರಷ್ಟು ಹೊಲಿಗೆಗಳ ಬಗ್ಗೆ ಮಾತನಾಡುತ್ತಿದ್ದೇವೆ. ಹಾಗಾಗಿ ಹೆಚ್ಚು ದಣಿವಾಗುವ ವಿಷಯವು ಇದರಲ್ಲಿ ಎಂದಿಗೂ ಕಂಡುಬರುವುದಿಲ್ಲ.
ಒಂದು ಹೊಲಿಗೆ ಮೆಷಿನ್ಗೆ ಎಲ್ಲವನ್ನೂ ಮಾಡಲಾಗುವುದಿಲ್ಲ
ಹೌದು, ನೀವು ಸರಿಯಾಗಿ ಹೇಳಿದಿರಿ. ಒಂದು ಹೊಲಿಗೆ ಮೆಷಿನ್ಗೆ ಕೇಕ್ ಮಾಡಲಾಗುವುದಿಲ್ಲ. ಆದರೆ ಉಷಾ ಅಲ್ಯೂರ್ನ ವಿಷಯಕ್ಕೆ ಬಂದರೆ ಅದು ಎಲ್ಲವನ್ನೂ ಮಾಡುತ್ತದೆ. ಅದು ಅನೇಕ ಹೊಲಿಗೆ ಪ್ಯಾಟರ್ನ್ಗಳು, ಸರಿಹೊಂದಿಸಬಹುದಾದ ಹೊಲಿಗೆ ಉದ್ದಗಳು, ಬಟನ್ ಹೋಲಿಂಗ್ ಮತ್ತು ಹೊಲಿಗೆ ಹಾಗೂ ಹಲವಾರು ಇತರೆ ವೈಶಿಷ್ಟ್ಯತೆಗಳನ್ನು ಹೊಂದಿದೆ, ಅವು ನಿಮಗೆ ಜೀವನವನ್ನು ಸುಲಭಗೊಳಿಸುತ್ತವೆ ಮತ್ತು ಹೊಲಿಗೆಯನ್ನು ಮೋಜಿನಿಂದ ಕೂಡಿರುವಂತೆ ಮಾಡುತ್ತವೆ.
ಬಟನ್ ಹೊಲಿಯುವ ಬಗ್ಗೆ ಮಾತನಾಡೋಣ. ಸ್ವಲ್ಪ ಸಮಯದ ಹಿಂದೆ ನೀವು ಇದನ್ನು ಕೈಯಿಂದ ಮಾಡಬೇಕಾಗಿತ್ತು ಅಥವಾ ವೃತ್ತಿಪರರಿಂದ ಮಾಡಿಸಬೇಕಿತ್ತು. ಈಗ ಉಷಾ ಅಲ್ಯೂರ್ ಡಿಲಕ್ಸ್ನಿಂದ, ಕಂಟ್ರೋಲ್ಗಳನ್ನು ಹೇಗೆ ಬಳಸುವುದು ಎಂಬುದನ್ನು ಅರ್ಥಮಾಡಿಕೊಂಡ ನಂತರ ಸಣ್ಣ ಮಕ್ಕಳೂ ಸಹ ಇದನ್ನು ಮಾಡಬಹುದು. ಇದಕ್ಕಾಗಿ ನೀವು ಮಾಡಬೇಕಿರುವುದಿಷ್ಟೆ ಬಟನ್ ಗಾತ್ರಕ್ಕೆ ನೀಡಲ್ಅನ್ನು ಸೆಟ್ ಮಾಡಿದ ನಂತರ ಪೆಡಲ್ಅನ್ನು ಕಾಲಿನಿಂದ ಒತ್ತಬೇಕು. ಅಷ್ಟೆ, ಕೆಲಸ ಪೂರ್ಣಗೊಳ್ಳುತ್ತದೆ.
“ಹೊಲಿಗೆ ಮೆಷಿನ್ಗಳು ನೀರಸವಾಗಿ ಕಾಣುತ್ತವೆ’
ಇದು ಸತ್ಯಕ್ಕೆ ಹತ್ತಿರವಾದ ಹೇಳಿಕೆಯಲ್ಲ. ಉಷಾ ಅಲ್ಯೂರ್ ಡಿಲಕ್ಸ್ ಒಂದು ಸುಂದರವಾಗಿ ಕಾಣುವ ಸಾಧನವಾಗಿದೆ, ವಾಸ್ತವವಾಗಿ ಎಲ್ಲಾ ಉಷಾ ಹೊಲಿಗೆ ಮೆಷಿನ್ಗಳು ನೋಡಲು ಅದ್ಭುತವಾಗಿವೆ. ಅವು ಅದ್ಭುತ ಗ್ರಾಫಿಕ್ಸ್ನೊಂದಿಗೆ ಅಂದವಾದ ಬಣ್ಣಗಳೊಂದಿಗೆ ಬರುತ್ತವೆ. ನೀವು ಒಬ್ಬ ಇಂಜಿನಿಯರ್ ಆಗಿದ್ದರೆ ಅಥವಾ ಯಾಂತ್ರಿಕ ಸಾಧನಗಳನ್ನು ಇಷ್ಟಪಡುತ್ತಿದ್ದರೆ, ಈ ಮೆಷಿನ್ನ ಭಾಗಗಳಿಗೆ ನೀಡಿದ ಗಮನ ಮತ್ತು ನಿಖರತೆಯಿಂದ ನೀವು ಆಶ್ಚರ್ಯಗೊಳ್ಳುತ್ತೀರಿ. ಇದು ಪ್ರತಿಯೊಂದು ಹೊಂದಿಕೊಳ್ಳುವ ಮತ್ತು ಕ್ರಮಬದ್ಧವಾಗಿ ಕೆಲಸಮಾಡುವ ಒಂದು ಉಪಕರಣವಾಗಿದೆ. ನೀಡಲ್ ಪ್ರತಿ ನಿಮಿಷಕ್ಕೆ ಕೆಲವು ನೂರು ಹೊಲಿಗೆಗಳ ವೇಗದಲ್ಲಿ ಚಲಿಸುತ್ತದೆ ಹಾಗೂ ಮೊದಲ ಹೊಲಿಗೆಯಿಂದ ಕೊನೆಯವರೆಗೆ ಸುಗಮವಾಗಿರುತ್ತದೆ. ಅದು ನಿಜವಾದ ಇಂಜಿನಿಯರಿಂಗ್ ಆಗಿದೆ.
ಆರಂಭಿಗರಿಗೆ ಅತ್ಯುತ್ತಮವಾಗಿರುತ್ತದೆ. ವೃತ್ತಿಪರರಿಗೂ ಸಹ ಉತ್ತಮವಾಗಿರುತ್ತದೆ.
ಉಷಾ ಅಲ್ಯೂರ್ ಡಿಲಕ್ಸ್ ನಮಗೆಲ್ಲರಿಗೂ ಅರ್ಥವಾಗುವ ಹೊಲಿಗೆಯನ್ನು ಆರಂಭಿಸಲು ಒಂದು ಅದ್ಭುತ ಮೆಷಿನ್ ಆಗಿದೆ. ಆದರೆ ಇದನ್ನು ಇನ್ನಷ್ಟು ಉತ್ತಮಗೊಳಿಸುವ ಅಂಶವೆಂದರೆ ಈ ಮೆಷಿನ್ನಿಂದ ನೀವು ಬೆಳವಣಿಗೆ ಹೊಂದುವುದನ್ನು ಮುಂದುವರಿಸಬಹುದು. ನಿಮ್ಮ ಕೌಶಲ್ಯಗಳು ಚುರುಕಾದಂತೆ ಮತ್ತು ನೀವು ಅವುಗಳಿಂದ ಹೆಚ್ಚೆಚ್ಚು ಕೆಲಸ ಮಾಡಿದಂತೆ, ಉಷಾ ಅಲ್ಯೂರ್ ಡಿಲಕ್ಸ್ ನಿಮ್ಮೊಂದಿಗೆ ಇದ್ದು ಬೆಂಬಲಿಸುವುನ್ನು ನೀವು ಕಾಣುತ್ತೀರಿ. ಇದು ಬಿಲ್ಟ್ ಇನ್ – ಹೊಲಿಗೆ ಪ್ಯಾಟರ್ನ್ಗಳು, ಹೊಲಿಗೆ ಉದ್ದಗಳು, ಬಟನ್ ಹೋಲಿಂಗ್, ಬಟನ್ ಹೊಲಿಯುವುದು ಮತ್ತು ನಿಮಗೆ ಬೇಕಾದ ಇನ್ನೂ ಅನೇಕ ವೈಶಿಷ್ಟ್ಯತೆಗಳೊಂದಿಗೆ ಬರುತ್ತದೆ.
ನೀವು ಇದನ್ನು ಅರ್ಥಮಾಡಿಕೊಳ್ಳಲು ಒಮ್ಮೆ ಪ್ರಯತ್ನಿಸಿ ನೋಡಬೇಕು.
ನಾವು ನಮ್ಮ ಮೆಷಿನ್ಗಳನ್ನು ವಿಶೇಷವಾಗಿ ಉಷಾ ಅಲ್ಯೂರ್ ಡಿಲಕ್ಸ್ಅನ್ನು ಪ್ರೀತಿಸುವ ಹೆಮ್ಮೆಯ ಪೋಷಕರಿದ್ದಂತೆ. ಅದಕ್ಕಾಗಿಯೇ ನಾವು ‘ಆಹಾರದ ರುಚಿ ತಿಂದರೆ ಮಾತ್ರ ತಿಳಿಯುತ್ತದೆ’ ಎಂಬುದನ್ನು ನಂಬುತ್ತೇವೆ. ಹಾಗಾಗಿ, ಉಷಾ ಅಲ್ಯೂರ್ ಡಿಲಕ್ಸ್ಅನ್ನು ಪ್ರಯತ್ನಿಸಿ, ಅದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ನೋಡಿ ಎಂದು ನಾವು ನಿಮಗೆ ಸೂಚಿಸುತ್ತೇವೆ. ಪುಟದ ಮೇಲ್ಭಾಗದಲ್ಲಿರುವ ಸಹಾಯವಾಣಿಗೆ ಕರೆ ಮಾಡಿ ಅಥವಾ ನಮ್ಮ ಅನೇಕ ಡೀಲರ್ಗಳಲ್ಲಿ ಒಬ್ಬರನ್ನು ಸಂಪರ್ಕಿಸಿ ಅಥವಾ ಉಷಾ ಹೊಲಿಗೆ ಶಾಲೆಗಳಿಗೆ ಭೇಟಿ ನೀಡಿ ನೀವು ಇದನ್ನು ಮಾಡಬಹುದು. ಪುಟದ ಮೇಲ್ಭಾಗದಲ್ಲಿರುವ ಲೊಕೇಟರ್ ಟೂಲ್ನಿಂದ ನಿಮಗೆ ಹತ್ತಿರವಾದುದನ್ನು ಹುಡುಕಿ.
ನೀವು ಉಷಾ ಅಲ್ಯೂರ್ ಡಿಲಕ್ಸ್ ಹೊಲಿಗೆ ಮೆಷಿನ್ಅನ್ನು ಮನೆಗೆ ತೆಗೆದುಕೊಂಡು ಬಂದ ನಂತರ, ನೇರವಾಗಿ ushasew.com ಗೆ ಲಾಗಿನ್ ಮಾಡಿ. ಇಲ್ಲಿ ನಾವು ಅನೇಕ ಪಾಠಗಳು ಮತ್ತು ಪ್ರಾಜೆಕ್ಟ್ಗಳನ್ನು ಹೊಂದಿದ್ದೇವೆ, ಅವುಗಳನ್ನು ನಿಮಗೆ ಹೊಲಿಗೆಯಲ್ಲಿ ಭದ್ರವಾದ ಅಡಿಪಾಯವನ್ನು ನೀಡುವುದಕ್ಕಾಗಿ ವಿನ್ಯಾಸಗೊಳಿಸಲಾಗಿದೆ. ಈ ಪಾಠಗಳು ಮತ್ತು ಪ್ರಾಜೆಕ್ಟ್ಗಳು ಮೊದಲು ನಿಮಗೆ ಮೂಲಭೂತ ವಿಷಯಗಳನ್ನು ಕಲಿಸುತ್ತವೆ, ನಂತರ ನಿಮ್ಮ ಕೌಶಲ್ಯಗಳನ್ನು ಅತ್ಯಂತ ಆಸಕ್ತಿದಾಯಕ ರೀತಿಯಲ್ಲಿ ಹೇಗೆ ಬಳಸಬೇಕೆಂಬುದನ್ನು ತೋರಿಸಿಕೊಡುತ್ತವೆ. ಎಲ್ಲಾ ವೀಡಿಯೊಗಳು 9 ಭಾರತೀಯ ಭಾಷೆಗಳಲ್ಲಿ ಲಭ್ಯಯಿವೆ.
ನೀವು ಪ್ರಾಜೆಕ್ಟ್ಗಳನ್ನು ಮಾಡಲು ಆರಂಭಿಸಿದಾಗ, ನಿಮ್ಮ ರಚನೆಗಳನ್ನು ನಮ್ಮ ಸಾಮಾಜಿಕ ಜಾಲತಾಣದ ಪುಟಗಳಲ್ಲಿ ಹಂಚಿಕೊಳ್ಳಿ. ನೀವು ಲಿಂಕ್ಗಳನ್ನು ಕೆಳಗೆ ಕಾಣಬಹುದು.
ನಿಮಗೆ ಸಹಾಯ ಅಥವಾ ಹೆಚ್ಚಿನ ಮಾಹಿತಿ ಬೇಕಿದ್ದಲ್ಲಿ, ನಮ್ಮ ಸಹಾಯವಾಣಿಗೆ ಕರೆ ಮಾಡಿ.