Why boys should learn sewing
ಗಂಡುಮಕ್ಕಳು ಏಕೆ ಹೊಲಿಯಲು ಆರಂಭಿಸಬೇಕು ಎಂಬುದಕ್ಕೆ ಕಾರಣಗಳನ್ನು ನಿಮ್ಮ ಮುಂದೆ ಪ್ರಸ್ತುತಪಡಿಸುವ ಮೊದಲು ನಾವು ಸ್ಪಷ್ಟಪಡಿಸಲು ಬಯಸುವುದೇನೆಂದರೆ ಎರಡೂ ಲಿಂಗಗಳ ಸಾಮರ್ಥ್ಯಗಳಲ್ಲಿ ಯಾವುದೇ ವ್ಯತ್ಯಾಸವಿಲ್ಲವೆಂದು ನಾವು ನಂಬಿದ್ದೇವೆ. ಗಂಡುಮಕ್ಕಳು ಮತ್ತು ಹೆಣ್ಣುಮಕ್ಕಳು ಅವರ ಮನಸ್ಸಿಗೆ ಹಿಡಿಸಿದ ಯಾವುದನ್ನಾದರೂ ಸಾಧಿಸಲು ಸಮರ್ಥರಾಗಿದ್ದಾರೆ. ಹೆಚ್ಚಿನ ಗಂಡುಮಕ್ಕಳು ಹೊಲಿಗೆಯನ್ನು ಕಲಿಯಬೇಕೆಂದು ನಾವು ಯೋಚಿಸುತ್ತೇವೆ ಮತ್ತು ಅದನ್ನು ಬೆಂಬಲಿಸಲು ನಾವು ಬಹಳಷ್ಟು ಕಾರಣಗಳನ್ನು ಹೊಂದಿದ್ದೇವೆ.
ಏಕಾಗ್ರತೆ ಮತ್ತು ಸಹನೆಯನ್ನು ಹೆಚ್ಚಿಸುತ್ತದೆ
ಹೊಲಿಗೆಯು ಒಂದು ಅದ್ಭುತ ಕೌಶಲ್ಯ ಹಾಗೂ ಅದು ಅನೇಕ ಪ್ರಯೋಜನಗಳನ್ನು ಹೊಂದಿದೆ. ನೀವು ವಿವಿಧ ಮೆಟೀರಿಯಲ್‌ಗಳೊಂದಿಗೆ ಮತ್ತು ಸೂಕ್ಷ್ಮ ಭಾಗಗಳಲ್ಲಿ ಕೆಲಸ ಮಾಡುವುದರಿಂದ, ಈ ಚಟುವಟಿಕೆಯು ನಿಮಗೆ ಸಹನೆಯನ್ನು ಕಲಿಸುತ್ತದೆ ಹಾಗೂ ನಿಮ್ಮ ಗಮನ ಕೇಂದ್ರೀಕರಿಸುವ ಮತ್ತು ಏಕಾಗ್ರತೆಯ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ನಿಗದಿತವಾಗಿ ಹೊಲಿಯುವ ಹೆಚ್ಚಿನ ಜನರು, ಅವರು ಹೊಲಿಗೆಯನ್ನು ಆರಂಭಿಸಿದಾಗ ‘ಜೋನ್’ ಒಳಗೆ ಪ್ರವೇಶಿಸುತ್ತಾರೆಂದು ಹೇಳುತ್ತಾರೆ. ಅದರರ್ಥ ಅವರು ಮಾಡುವ ಕೆಲಸಕ್ಕೆ ಹೊರಗಿನ ಪ್ರಪಂಚವನ್ನು ಬಿಟ್ಟು ತಮ್ಮ ಸಂಪೂರ್ಣ ಗಮನವನ್ನು ನೀಡಲು ಸಮರ್ಥರಾಗುತ್ತಾರೆ. ನಮ್ಮ ಗಂಡುಮಕ್ಕಳು ಮತ್ತು ಹೆಣ್ಣುಮಕ್ಕಳು ಇಬ್ಬರೂ ಸಹ ಇದನ್ನು ಕಲಿಯಬೇಕು. ಏಕಾಗ್ರತೆ ಕಡಿಮೆಯಿರುವ ಈ ವಯಸ್ಸಿನಲ್ಲಿ ದೀರ್ಘ ಕಾಲದವರೆಗೆ ಗಮನ ಕೇಂದ್ರೀಕರಿಸಲು ನೆರವಾಗುವ ಒಂದು ಚಟುವಟಿಕೆಯನ್ನು ಹೊಂದಿರುವುದು ಒಳ್ಳೆಯದು.
ಹೆಚ್ಚಿನ ಫ್ಯಾಷನ್ ಡಿಸೈನರ್‌ಗಳು ಪುರುಷರು.
ಪ್ರಾಮಾಣಿಕವಾಗಿ ಇದಕ್ಕೆ ಯಾವುದೇ ಕಾರಣವಿಲ್ಲ. ಪಾಕಶಾಲೆಯ ವಿಷಯದಲ್ಲೂ ಇದೇ ಆಗಿದೆ, ಅದರಲ್ಲಿ ನೀವು ವೃತ್ತಿಯ ಉನ್ನತ ಸ್ಥಾನದಲ್ಲಿ ಹೆಚ್ಚಿನ ಪುರುಷರನ್ನು ಕಾಣುತ್ತೀರಿ. ನಾವು ಹೇಳಲು ಪ್ರಯತ್ನಿಸುತ್ತಿರುವುದೇನೆಂದರೆ ಹೊಲಿಗೆಯು ಮಹಿಳೆಯರಿಗೆ ಮಾತ್ರವಲ್ಲ, ಆ ದಿನಗಳು ಕಳೆದುಹೋಗಿವೆ. ಇಂದು ನೀವು ಹೊಲಿಗೆಯನ್ನು ಕಲಿತುಕೊಂಡರೆ, ಪ್ರಪಂಚದ ಕೆಲವು ಅತ್ಯುತ್ತಮ ಫ್ಯಾಷನ್ ಮತ್ತು ಡಿಸೈನ್ ಶಾಲೆಗಳಲ್ಲಿ ಪ್ರವೇಶ ಪಡೆಯಲು ಸುಲಭವಾಗುತ್ತದೆ.
ಬದಲಾವಣೆಗಳಿಲ್ಲದ ಒಂದೇ ಮಾದರಿಯನ್ನು ಮುರಿಯಿರಿ.
ನಾವೆಲ್ಲರೂ ಪ್ರೀತಿಯ ಅಮ್ಮ ಅಥವಾ ಅಜ್ಜಿ ಹೊಲಿಗೆ ಮೆಷಿನ್ ಮುಂದೆ ಕುಳಿತಿರುವ ಚಿತ್ರಗಳನ್ನು ನೋಡಿ ಬೆಳೆದಿದ್ದೇವೆ. ಅದು ತುಂಬಾ ಸ್ಪಷ್ಟವಾಗಿದೆ!ಇಂದು ಜಗತ್ತು ಬದಲಾಗಿದೆ ಹಾಗೂ ಪ್ರತಿಯೊಬ್ಬರೂ ಆತ ಅಥವಾ ಆಕೆ ಇಷ್ಟಪಡುವ ಏನನ್ನಾದರೂ ಅನುಸರಿಸುವ ಅವಕಾಶವನ್ನು ಹೊಂದಿದ್ದಾರೆ. ಹಾಗಾಗಿ ಹೆಚ್ಚು ಗಂಡುಮಕ್ಕಳನ್ನು ಈ ಕ್ಷೇತ್ರಕ್ಕೆ ಸೇರಿಸಲು ಆರಂಭಿಸೋಣ. ಯಾರಿಗೊತ್ತು ಮುಂದಿನ ದೊಡ್ಡ ಅಂತಾರಾಷ್ಟ್ರೀಯ ಡಿಸೈನರ್ ನಿಮ್ಮ ಮಗನಾಗಬಹುದು.
ಸ್ವಾವಲಂಬಿಯಾಗುವ ಸಮಯ
ಈಗ ಇದು ಹೊಲಿಗೆಯು ಹೆಚ್ಚು ನೆರವಾಗುವ ಒಂದು ಕ್ಷೇತ್ರವಾಗಿದೆ. ನಮ್ಮ ಮಕ್ಕಳು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಅಥವಾ ಕೆಲಸಕ್ಕಾಗಿ ಮನೆ ಬಿಟ್ಟು ಬೇರೆ ನಗರಗಳಿಗೆ ಹೋಗುವಾಗ, ಅವರಿಗೆ ಸ್ವಾವಲಂಬಿಯಾಗುವ ಮತ್ತು ಯಾರನ್ನೂ ಅವಲಂಬಿಸದಿರುವ ಕೌಶಲ್ಯಗಳನ್ನು ನೀಡುವುದು ಅತಿ ಮುಖ್ಯ. ಬಿಚ್ಚಿಕೊಂಡಿರುವ ಬಟನ್ಅನ್ನು ಹೊಲಿಯುವುದು ಅಥವಾ ಓಪನ್ ಆಗಿರುವುದನ್ನು ಹೆಮ್ ಮಾಡುವುದು ಪ್ರತಿಯೊಬ್ಬರೂ ಮಾಡುವ ಕೆಲಸದ ಒಂದು ಭಾಗವಾಗಿರಬೇಕು. ಹೊಲಿಗೆ ಕಿಟ್ ಪ್ರತಿಯೊಬ್ಬರ ಮನೆಯ ಒಂದು ಭಾಗವಾಗಿರಬೇಕು.
ನಿಮ್ಮ ಮಗನಿಗೆ ಹೊಲಿಗೆಯನ್ನು ಕಲಿಸುವುದು ಹೇಗೆ ಎಂದು ನೀವು ಅಚ್ಚರಿಪಡುತ್ತಿದ್ದರೆ, ಬೇರೆಲ್ಲೂ ನೋಡಬೇಡಿ Ushasew.com ಗೆ ಲಾಗಿನ್ ಮಾಡಿ. ಇಲ್ಲಿ ನಾವು ವಿನ್ಯಾಸಗೊಳಿಸಿರುವ ಪಾಠಗಳು ಮತ್ತು ಪ್ರಾಜೆಕ್ಟ್‌ಗಳು ಹೊಲಿಗೆ ಎಂದರೇನು ಎಂಬುದನ್ನು ನಿಮಗೆ ಅರ್ಥಮಾಡಿಸುವುದು ಮಾತ್ರವಲ್ಲದೆ ಹೊಲಿಗೆಯನ್ನು ಆರಂಬಿಸಲು ಸೂಕ್ತ ಕೌಶಲ್ಯಗಳನ್ನು ಪಡೆಯಲು ಬೇಕಾದ ಎಲ್ಲಾ ಹಂತಗಳನ್ನು ನಿಮಗೆ ತಿಳಿಸಿಕೊಡುತ್ತವೆ. ಪಾಠಗಳು ಸವಿವರವಾಗಿವೆ ಹಾಗೂ ಅನುಸರಿಸಲು ಸುಲಭವಾದ ಮತ್ತು ಸ್ಪಷ್ಟ ಸೂಚನೆಗಳೊಂದಿಗೆ ಲಭ್ಯವಾಗುತ್ತವೆ. ಪ್ರತಿಯೊಂದು ಪಾಠವು ಮುಂದಿನದಕ್ಕೆ ಕರೆದೊಯ್ಯುತ್ತದೆ. ಒಮ್ಮೆ ನೀವು ಕೌಶಲ್ಯಗಳನ್ನು ಪಡೆದ ನಂತರ, ಪಾಠಗಳ ನಡುವೆ ಇರುವ ಪ್ರಾಜೆಕ್ಟ್‌ಗಳನ್ನು ತಲುಪುತ್ತೀರಿ, ಅದರಲ್ಲಿ ನೀವು ಹೊಸದಾಗಿ ಕಲಿತ ಕೌಶಲ್ಯಗಳನ್ನು ಬಳಸಿಕೊಳ್ಳಬಹುದು.
ಪ್ರಾಜೆಕ್ಟ್‌ಗಳು ಆಸಕ್ತಿದಾಯಕವಾಗಿವೆ ಮತ್ತು ಪ್ರಯೋಜನಕಾರಿಯಾಗಿವೆ.
ಪಾಠಗಳ ನಡುವೆ ನೀವು ಕಾಣುವ ಪ್ರಾಜೆಕ್ಟ್‌ಗಳನ್ನು ನಿಮಗೆ ಸವಾಲೊಡ್ಡಲು ಮತ್ತು ನೀವು ಕಲಿತದ್ದನ್ನು ಬಳಸಿಕೊಳ್ಳುವಂತೆ ಮಾಡಲು ಇರಿಸಲಾಗಿದೆ. ಉದಾಹರಣೆಗಾಗಿ, ಮೊದಲನೆಯದು ಬುಕ್‌ಮಾರ್ಕ್ಅನ್ನು ಮಾಡುವುದರ ಕುರಿತಾಗಿದೆ. ನೇರ ಸಾಲುಗಳಲ್ಲಿ ಮತ್ತು ಕಾರ್ನರ್‌ಗಳಾದ್ಯಂತ ಹೊಲಿಯುವುದು ಹೇಗೆ ಎಂಬುದನ್ನು ನೀವು ಕಲಿತ ನಂತರ ಇದು ಬರುತ್ತದೆ. ಹಾಗಾಗಿ ಈ ಪ್ರಾಜೆಕ್ಟ್ ಈ ಎರಡು ಸಾಮರ್ಥ್ಯಗಳನ್ನಲ್ಲದೆ ಬೇರೆ ಏನನ್ನೂ ಬಳಸಿಕೊಳ್ಳುವುದಿಲ್ಲ. ಇದರ ಶ್ರೇಷ್ಠತೆಯೇನೆಂದರೆ ಪ್ರತಿಫಲವು ಅದ್ಭುತವಾಗಿದೆ. ನಿಮ್ಮ ರಚನೆಗಳು ಸರಿಯಾದ ಆಕಾರ ಪಡೆಯುವುದನ್ನು ನೋಡುವುದು ಒಂದು ಅದ್ಭುತ ಅನುಭವ.
ಹಾಗಾಗಿ ನಿಮ್ಮ ಮಗ, ಮಗಳು, ಮೊಮ್ಮಗ ಅಥವಾ ಮೊಮ್ಮಗಳು ಅಥವಾ ನೀವೇ ಸ್ವತಃ ಹೊಲಿಗೆಯನ್ನು ಕಲಿಯಲು ಬಯಸಿದಲ್ಲಿ, Ushasew.com ಗೆ ಲಾಗಿನ್ ಮಾಡಿ ಮತ್ತು ಕೂಡಲೇ ನಿಮ್ಮ ಪಾಠಗಳನ್ನು ಆರಂಭಿಸಿ. ಅತಿಕಡಿಮೆ ಸಮಯದಲ್ಲಿ ನೀವು ಹೆಚ್ಚು ಉಪಯುಕ್ತವಾದ ಕೌಶಲ್ಯವನ್ನು ಕಲಿಯುತ್ತೀರಿ.
ತೋರಿಸಿದ ಪ್ರಾಜೆಕ್ಟ್‌ಗಳನ್ನು ನೀವು ಮಾಡಲು ಆರಂಭಿಸಿದಾಗ, ನಿಮ್ಮ ರಚನೆಗಳನ್ನು ನಮ್ಮ ಸಾಮಾಜಿಕ ಜಾಲತಾಣದ ಪುಟಗಳಲ್ಲಿ ಹಂಚಿಕೊಳ್ಳಿ. ನೀವು ಲಿಂಕ್‌ಗಳನ್ನು ಕೆಳಗೆ ಕಾಣಬಹುದು.