8 Sewing Tips you should know before you start
ಹೊಲಿಗೆಯೆಂಬುವುದು ಒಂದು ಕಲೆ, ಅದು ಹೆಚ್ಚಿನ ಸಂತೋಷ ಮತ್ತು ಆನಂದವನ್ನು ನೀಡುತ್ತದೆ. ಅದು ರಚನಾತ್ಮಕವಾಗಿರಲು ಮತ್ತು ಅನೇಕ ವಿಧಾನಗಳಲ್ಲಿ ನಿಮ್ಮನ್ನು ನೀವು ವ್ಯಕ್ತಪಡಿಸಿಕೊಳ್ಳಲು ಅವಕಾಶ ನೀಡುತ್ತದೆ. ನೀವು ಗಾರ್ಮೆಂಟ್ಗಳನ್ನು ವಿನ್ಯಾಸಗೊಳಿಸಬಹುದು, ವಿವಿಧ ಫ್ಯಾಬ್ರಿಕ್ಗಳನ್ನು ಬಳಸಿ ನಿಮ್ಮ ಮನೆಗೆ ವಸ್ತುಗಳನ್ನು ಮಾಡಬಹುದು ಅಥವಾ ಬೇಡವೆಂದು ಎಸೆದ ಬಟ್ಟೆ ಅಥವಾ ಮೆಟೀರಿಯಲ್ಗಳನ್ನು ಉತ್ತಮವಾಗಿ ಬಳಸುವ ಮಾರ್ಗಗಳನ್ನು ಕಂಡುಕೊಳ್ಳಬಹುದು.
ನೀವು ಹಿಂದೆಂದೂ ಹೊಲಿಗೆ ಮೆಷಿನ್ಅನ್ನು ಬಳಸಿಲ್ಲದಿದ್ದರೆ ಅಥವಾ ಈಗಷ್ಟೇ ಆರಂಭಿಸಿದ್ದರೆ, ನೀವು ಕೆಲವು ವಿಷಯಗಳನ್ನು ತಿಳಿದುಕೊಳ್ಳಬೇಕು. ಮೊದಲಿಗೆ ನೀವು ಸಂಘಟಿತರಾಗಬೇಕು ಮತ್ತು ಮುಂದುವರಿಯಲು ಸರಿಯಾದ ಪಾಠಗಳನ್ನು ಕಂಡುಕೊಳ್ಳಬೇಕು. ಮಾಹಿತಿಯುಕ್ತ ಮತ್ತು ಶೈಕ್ಷಣಿಕ ರೀತಿಯಲ್ಲಿ ಪಾಠಗಳ ಪ್ರತಿಯೊಂದು ಹಂತವನ್ನು ವಿವರಿಸಲಾಗಿದೆ. UshaSew.com ನಿಮಗಾಗಿ ಪಾಠಗಳನ್ನು ಹೊಂದಿದೆ. ಒಬ್ಬ ನಿಪುಣ ಕುಶಲಕರ್ಮಿಯಾಗುವ ಪ್ರತಿಯೊಂದು ಹಂತವನ್ನು ವೀಡಿಯೊ ಆಗಿ ಮಾಡಲಾಗಿದೆ. ನೀವು ಮೂಲಭೂತ ವಿಷಯಗಳು, ನೇರ ಸಾಲುಗಳಲ್ಲಿ ಹೇಗೆ ಹೊಲಿಯುವುದು ಎಂಬುವುದರೊಂದಿಗೆ ಆರಂಭಿಸಿ, ನಂತರ ಕರ್ವ್ಗಳು, ಕಾರ್ನರ್ಗಳು ಮತ್ತು ಎಲ್ಲಾ ಇತರೆ ಹೊಲಿಗೆ ವಿಧಾನಗಳೆಡೆಗೆ ಸಾಗಿ. ನೀವು ಕಲಿತದ್ದನ್ನು ಬಲಪಡಿಸಲು ಮತ್ತು ಪ್ರಾಯೋಗಿಕವಾಗಿ ಬಳಸಲು, ಈ ಪಾಠಗಳ ನಡುವೆ ಕೆಲವು ಪ್ರಾಜೆಕ್ಟ್ಗಳನ್ನು ಕುಶಲತೆಯಿಂದ ಇರಿಸಲಾಗಿದೆಅವು ನಿಮ್ಮ ಕೌಶಲ್ಯಗಳನ್ನು ಚುರುಕುಗೊಳಿಸುತ್ತವೆ ಮತ್ತು ನಿಮ್ಮ ಹೊಸ ಸಾಮರ್ಥ್ಯಗಳನ್ನು ಪ್ರದರ್ಶಿಸುತ್ತವೆ. ಆ ಮೂಲಕ ನಿಜವಾಗಿ ಏನಾದರೂ ರಚಿಸುವ ಸಂತೋಷವನ್ನು ನಿಮಗೆ ನೀಡುತ್ತವೆ.
ಅತ್ಯಂತ ನುರಿತ ಮತ್ತು ಅನುಭವಸ್ಥ ವ್ಯಕ್ತಿಯೂ ತಿಳಿದುಕೊಳ್ಳಬೇಕಾದ ಕೆಲವು ಅದ್ಭುತ ಸಲಹೆಗಳು ಇಲ್ಲಿವೆ.
- ನಿಮ್ಮ ಮೆಷಿನ್ಅನ್ನು ಸರಿಯಾಗಿ ಥ್ರೆಡ್ ಮಾಡಿ
ಹೆಚ್ಚಿನ ಉಷಾ ಹೊಲಿಗೆ ಮೆಷಿನ್ಗಳು ಸ್ವಯಂಚಾಲಿತ ಥ್ರೆಡಿಂಗ್ ಫಂಕ್ಷನ್ಅನ್ನು ಹೊಂದಿವೆ, ಆದರೂ ಇದನ್ನು ಯಾವಾಗ ಮತ್ತು ಹೇಗೆ ಸರಿಯಾಗಿ ಮಾಡಬೇಕು ಎಂಬುದನ್ನು ತಿಳಿದುಕೊಂಡಿರುವುದು ಉತ್ತಮ. See the ನಿಮ್ಮ ಮೆಷಿನ್ಅನ್ನು ಥ್ರೆಡ್ ಮಾಡುವ ವೀಡಿಯೊವನ್ನು ನೋಡಿ ಮತ್ತು ಸೂಚನೆಗಳನ್ನು ಅನುಸರಿಸಿ. ಇದರಲ್ಲಿ ಪ್ರತಿಯೊಂದು ಹಂತವನ್ನು ವಿವರಿಸಲಾಗಿದೆ ಹಾಗೂ ಇದನ್ನು ಸರಿಯಾದ ರೀತಿಯಲ್ಲಿ ಹೇಗೆ ಮಾಡುವುದು ಎಂಬುದನ್ನು ನೀವು ತಿಳಿಯುತ್ತೀರಿ. ನೀವು ಹೊಲಿಗೆಯನ್ನು ಆರಂಭಿಸುವ ಮೊದಲು ಇದನ್ನು ಕೆಲವು ಬಾರಿ ಮಾಡುವಂತೆ ನಾವು ಸೂಚಿಸುತ್ತೇವೆ.
- ಪಿನ್ಗಳನ್ನು ಬಳಸುವಾಗ ಹಿಂಜರಿಯಬೇಡಿ
ನೀವು ಹೆಮ್ಗಳನ್ನು ಹೊಲಿಯುವಾಗ ಅಥವಾ ಸ್ಲೀವ್ ಜೋಡಿಸುವಾಗ, ಫ್ಯಾಬ್ರಿಕ್ಅನ್ನು ಟ್ಯಾಕ್ ಮಾಡಲು ಪಿನ್ಗಳನ್ನು ಬಳಸಿ. ಹೆಚ್ಚು ಪಿನ್ಗಳನ್ನು ಬಳಸಲು ನಾಚಿಕೆಪಡಬೇಡಿ, ಫ್ಯಾಬ್ರಿಕ್ಅನ್ನು ಸರಿಯಾಗಿ ಹಿಡಿದುಕೊಳ್ಳಲು ಬೇಕಾದಷ್ಟು ಪಿನ್ಗಳನ್ನು ಬಳಸಿ. ಮೆಟೀರಿಯಲ್ಅನ್ನು ಆಗಾಗ್ಗೆ ಸಾಲುಗೊಳಿಸುವ ಬಗ್ಗೆ ಚಿಂತಿಸುವ ಅಗತ್ಯವಿಲ್ಲದೆ, ನೀವು ಈ ರೀತಿಯಲ್ಲಿ ಅಚ್ಚುಕಟ್ಟಾದ ಮತ್ತು ಅಂದವಾದ ಫಿನಿಶ್ಅನ್ನು ಖಚಿತಪಡಿಸಬಹುದು. ನೀವು ಹೊಲಿಗೆಯನ್ನು ಪೂರ್ಣಗೊಳಿಸಿದ ನಂತರ ಪಿನ್ಗಳನ್ನು ತೆಗೆದು, ಪಿನ್ ಕುಶನ್ನಲ್ಲಿ ಇರಿಸಿ.
- ನಿಮ್ಮ ಪಿನ್ಗಳಿಗೆ ಒಂದು ಅಯಸ್ಕಾಂತ.
ನಾವು ಪಿನ್ಗಳು ಮತ್ತು ನೀಡಲ್ಗಳ ವಿಷಯದ ಬಗ್ಗೆ ಹೇಳುತ್ತಿರುವುದರಿಂದ, ನಾವು ಕಲಿತಿರುವ ಒಂದು ಬುದ್ಧಿವಂತ ಸಲಹೆಯೆಂದರೆ ಎಲ್ಲಾ ಪಿನ್ಗಳು ಮತ್ತು ನೀಡಲ್ಗಳನ್ನಿಡಲು ನಮ್ಮ ಹೊಲಿಗೆ ಕಿಟ್ನಲ್ಲಿ ಒಂದು ಸಣ್ಣ ಅಯಸ್ಕಾಂತವನ್ನು ಇರಿಸುವುದು. ನೀವು ಪಿನ್ ಕುಶನ್ಅನ್ನು ಬಳಸುತ್ತಿದ್ದರೆ, ಅದಕ್ಕಾಗಿ ಒಂದನ್ನು ನೀವು ಹೊಲಿಯಬಹುದು. ಇದು ಬಾಕ್ಸ್ ಕೆಳಗೆ ಬಿದ್ದರೆ ಪಿನ್ಗಳು ಚೆದುರಿಹೋಗದಂತೆ ತಡೆಯುತ್ತದೆ. ಪಿನ್ಗಳು ಅಯಸ್ಕಾಂತಕ್ಕೆ ಅಂಟಿಕೊಳ್ಳುತ್ತವೆ ಹಾಗೂ ಅವುಗಳನ್ನು ಸುಲಭ ಮತ್ತು ವೇಗವಾಗಿ ಆರಿಸಿಕೊಳ್ಳಬಹುದು.
- ಹೊಲಿಯುವ ಜಾಗದಲ್ಲಿ ಸಾಕಷ್ಟು ಬೆಳಕಿರಬೇಕು.
ಯಾವಾಗಲೂ ಚೆನ್ನಾಗಿ ಬೆಳಕಿರುವ ಸ್ಥಳದಲ್ಲಿ ಕೆಲಸ ಮಾಡುವುದು ಉತ್ತಮ. ಹೆಚ್ಚಾಗಿ ನೀವು ಹೊಲಿಯುವಾಗ ಬೆಳಕಿರುವುದು ಮುಖ್ಯ. ಅದರಿಂದ ನೀವು ಏನು ಮಾಡುತ್ತಿದ್ದೀರಿ ಮತ್ತು ನೀಡಲ್ ಹೇಗೆ ಚಲಿಸುತ್ತಿದೆ ಎಂಬುದನ್ನು ನಿಖರವಾಗಿ ನೋಡಲು ಸಾಧ್ಯವಾಗುತ್ತದೆ. ಸಣ್ಣ, ಪ್ರಕಾಶಮಾನವಾದ ಲ್ಯಾಂಪ್ ಇದ್ದರೆ ಒಳ್ಳೆಯದು. ನಿಮ್ಮ ಕಣ್ಣುಗಳನ್ನು ಕುಕ್ಕದ ರೀತಿಯಲ್ಲಿ ಬೆಳಕಿನ ಕಿರಣಗಳನ್ನು ನಿಮ್ಮ ಕೆಲಸದ ಸ್ಥಳಕ್ಕೆ ನೇರವಾಗಿ ಹಾಯಿಸಬಹುದು.
- ಥ್ರೆಡ್ ಒತ್ತಡವನ್ನು ಪರಿಶೀಲಿಸಿ
ಆರಂಭಿಸುವ ಮೊದಲು ಥ್ರೆಡ್ನ ಒತ್ತಡವನ್ನು ಪರಿಶೀಲಿಸಲು ಮರೆಯುವುದು ಹೆಚ್ಚಿನ ಆರಂಭಿಗರು ಮತ್ತು ಕೆಲವು ಅನುಭವಸ್ಥರೂ ಸಹ ಮಾಡುವ ತಪ್ಪುಗಳಲ್ಲಿ ಒಂದಾಗಿದೆ. ಈಗ ಪ್ರತಿಯೊಂದು ಫ್ಯಾಬ್ರಿಕ್ ವಿಭಿನ್ನ ನೆಯ್ಗೆಯನ್ನು ಹೊಂದಿರುತ್ತದೆ, ಅದರರ್ಥ ನೀವು ಫ್ಯಾಬ್ರಿಕ್ಗೆ ಸರಿಹೊಂದುವಂತೆ ನಿಮ್ಮ ಮೆಷಿನ್ಅನ್ನು ಸೆಟಪ್ ಮಾಡಬೇಕಾಗುತ್ತದೆ. ಥ್ರೆಡ್ನ ಒತ್ತಡವು ಪ್ರಮುಖ ಪಾತ್ರವಹಿಸುವುದು ಇಲ್ಲೇ. ಹೆಚ್ಚು ಸಡಿಲವಾಗಿದ್ದರೆ, ಹೊಲಿಗೆಗಳು ಕೆಟ್ಟದಾಗಿ (ಟ್ಯಾಕಿ) ಕಾಣುತ್ತವೆ ಹಾಗೆಯೇ ಹೆಚ್ಚು ಬಿಗಿಯಾಗಿದ್ದರೆ ಗ್ಯಾದರ್ಗಳು(ನೆರಿಗೆಗಳು) ಕಂಡುಬರುತ್ತವೆ. ಆದ್ದರಿಂದ ನೀವು ಆರಂಭಿಸುವ ಮೊದಲು ಪರಿಶೀಲಿಸಿ. ಯಾವಾಗಲೂ!
- ನೀವು ಆರಂಭಿಸುವ ಮೊದಲು ಥ್ರೆಡ್ನ ಬಿಗಿತವನ್ನು ಪರಿಶೀಲಿಸಿ.
ಒಬ್ಬ ವ್ಯಕ್ತಿಯು ಹೊಲಿಗೆಯನ್ನು ಆರಂಭಿಸಿ, ಪ್ರಾಜೆಕ್ಟ್ನ ಮಧ್ಯದಲ್ಲಿ ಥ್ರೆಡ್ನ ನಿಯಂತ್ರಣ ಕಳೆದುಕೊಳ್ಳುವುದು ಅಸಾಮಾನ್ಯವೇನಲ್ಲ. ಇದು ನಮಗೆಲ್ಲರಿಗೂ ಯಾವಾಗಲಾದರೊಮ್ಮೆ ಸಂಭವಿಸಿರುತ್ತದೆ. ಹಾಗಾಗಿ ಸ್ಪೂಲ್ ಮತ್ತು ಬಾಬಿನ್ ಫುಲ್ ಆಗಿದೆಯೇ ಎಂದು ಪರಿಶೀಲಿಸಿ. ಹಾಗೂ ನೀವು ಅದೇ ಬಣ್ಣ ಮತ್ತು ವಿಧದ ಸಾಕಷ್ಟು ಥ್ರೆಡ್ ಹೊಂದಿರುವುದನ್ನು ಖಾತ್ರಿಪಡಿಸಿಕೊಳ್ಳಿ. ಮಧ್ಯದಲ್ಲಿ ನಿಲ್ಲಿಸಿದರೆ ನಿಯಂತ್ರಣ ತಪ್ಪಿಹೋಗುತ್ತದೆ ಮತ್ತು ಕಿರಿಕಿರಿಯುಂಟಾಗುತ್ತದೆ.
- ಎರಡು ಬಾರಿ ಅಳತೆ ಮಾಡಿ, ಒಂದು ಬಾರಿ ಕತ್ತರಿಸಿ
ನೀವು ಅಳತೆಗಳನ್ನು ಸರಿಯಾಗಿ ಮಾಡಿ, ಅದು ಅದ್ಭುತ ಫಿನಿಶ್ಗೆ ಅತಿಮುಖ್ಯ. ಇದನ್ನು ಮಾಡಲು ನೀವು ನಿಮ್ಮ ಫ್ಯಾಬ್ರಿಕ್ಅನ್ನು ಕನಿಷ್ಠ ಎರಡು ಬಾರಿ ಅಳತೆ ಮಾಡಬೇಕು, ನಂತರ ಕತ್ತರಿಸಲು ಆರಂಭಿಸಬೇಕು. ಇದನ್ನು ಮಾಡುವುದರಿಂದ ನೀವು ಅತೀ ಹೆಚ್ಚು ಅಥವಾ ಅತೀ ಕಡಿಮೆ ಕತ್ತರಿಸುವುದಿಲ್ಲ ಎಂಬುದನ್ನು ಖಾತ್ರಿಪಡಿಸಿಕೊಳ್ಳಬಹುದು. ನೀವು ಒಮ್ಮೆ ಕತ್ತರಿಸಿದ ನಂತರ ಹಿಂದಕ್ಕೆ ಹೋಗಲಾಗುವುದಿಲ್ಲ ಎಂಬುದನ್ನು ನೆನಪಿಡಿ.
- ಫ್ಯಾಬ್ರಿಕ್ನ ಚೂರುಗಳನ್ನು ಅಭ್ಯಾಸ ಮಾಡುವುದಕ್ಕಾಗಿ ಇರಿಸಿಕೊಳ್ಳಿ.
ನಿಮ್ಮೆಲ್ಲಾ ಫ್ಯಾಬ್ರಿಕ್ ಚೂರುಗಳನ್ನು ಉಳಿಸಿಕೊಳ್ಳಿ ಮತ್ತು ಹೊಲಿಗೆಯನ್ನು ಅಭ್ಯಾಸ ಮಾಡಲು ಅವುಗಳನ್ನು ಬಳಸಿ. ವೃತ್ತಿಪರರಾಗಲು ಇದು ಅತಿ ಮುಖ್ಯ. ನೀವು ಹೊಲಿಗೆ ವಿಧಗಳೊಂದಿಗೆ ಪ್ರಯೋಗ ಮಾಡಬಹುದು (ಹೆಚ್ಚಿನ ಉಷಾ ಮೆಷಿನ್ಗಳು ನಿಮಗೆ ಬಹಳಷ್ಟು ಆಯ್ಕೆಗಳನ್ನು ಒದಗಿಸುತ್ತವೆ) ಹಾಗೂ ವಿವಿಧ ಹೊಲಿಗೆ ಉದ್ದಗಳನ್ನು ಉತ್ತಮವಾಗಿ ಹೇಗೆ ಬಳಸುವುದು ಎಂಬುದನ್ನು ತಿಳಿದುಕೊಳ್ಳಬಹುದು. ನೀವು ನಿಪುಣರಾದ ನಂತರವೂ ಸಹ ನೀವು ಕಲಿತದ್ದನ್ನು ನಿಗದಿತವಾಗಿ ಅಭ್ಯಾಸ ಮಾಡುತ್ತಿರಿ. ನೇರ ಸಾಲಿನಲ್ಲಿ ಹೊಲಿಯುವುದು, ಹೆಮಿಂಗ್, ಕಾರ್ನರ್ಗಳಾದ್ಯಂತ ಹೊಲಿಯುವುದು ಮೊದಲಾದ ಮೂಲಭೂತ ವಿಷಯಗಳು ಯಾವಾಗಲೂ ಪ್ರಮುಖ ಪಾತ್ರವಹಿಸುತ್ತವೆ, ಹಾಗಾಗಿ ನೀವು ಹೆಚ್ಚು ನಿಪುಣರಾದಷ್ಟು, ನಿಮ್ಮ ರಚನೆಗಳು ಉತ್ತಮವಾಗಿ ಕಾಣುತ್ತವೆ.
ಹೊಲಿಗೆ ಕಲೆಯನ್ನು ಅರ್ಥಮಾಡಿಕೊಳ್ಳಲು ಮತ್ತು ಕಲಿಯಲು ನಿಮಗೆ ನೆರವಾಗಲು Ushasew.com ಒಂದು ಉತ್ತಮವಾಗಿ ಯೋಜಿಸಿದ ಪಾಠಗಳು ಮತ್ತು ಪ್ರಾಜೆಕ್ಟ್ಗಳ ಸೆಟ್ಅನ್ನು ಒಟ್ಟಿಗೆ ಹೊಂದಿದೆ. ವೀಡಿಯೊಗಳನ್ನು ವೀಕ್ಷಿಸಿ ಮತ್ತು ಸೂಚನೆಗಳನ್ನು ಅನುಸರಿಸಿ ಹಾಗೂ ನಿಮ್ಮ ಉಷಾ ಹೊಲಿಗೆ ಮೆಷಿನ್ನಿಂದ ಅತ್ಯುತ್ತಮವಾದುದನ್ನು ಪಡೆಯಲು ನೀವು ಶೀಘ್ರವಾಗಿ ಕಲಿಯುತ್ತೀರಿ. ಹೆಚ್ಚೆಚ್ಚು ಅಭ್ಯಾಸ ಮಾಡುವುದು ಇದಕ್ಕೆ ಅತಿಮುಖ್ಯ.
ನೀವು ಪ್ರಾಜೆಕ್ಟ್ಗಳನ್ನು ಮಾಡಲು ಆರಂಭಿಸಿದಾಗ, ನಿಮ್ಮ ರಚನೆಗಳನ್ನು ನಮ್ಮ ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಿ. ನೀವು ಲಿಂಕ್ಗಳನ್ನು ಕೆಳಗೆ ಕಾಣಬಹುದು.